ಶ್ರೀನಗರ: ಉಗ್ರರ ಗುಂಡಿಗೆ ವ್ಯಕ್ತಿ ಬಲಿ, 24 ಗಂಟೆಗಳಲ್ಲಿ 2ನೇ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇಂದು ಅಂಗಡಿಯೊಂದರೊಳಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು NDTV ವರದಿ ಮಾಡಿದೆ.
ಗುಂಡಿನ ದಾಳಿಯ ನಂತರ ಮುಹಮ್ಮದ್ ಇಬ್ರಾಹಿಂ ಎಂದು ಗುರುತಿಸಲಾದ ವ್ಯಕ್ತಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಇಬ್ರಾಹಿಂ ಅವರು ಕಾಶ್ಮೀರಿ ಪಂಡಿತರೊಬ್ಬರ ಮಾಲಿಕತ್ವದ ಅಂಗಡಿಯಲ್ಲಿ ಮಾರಾಟಗಾರರಾಗಿದ್ದರು ಹಾಗೂ ಬಂಡಿಪೋರಾ ಜಿಲ್ಲೆಯ ನಿವಾಸಿಯಾಗಿದ್ದರು.
ದಾಳಿಕೋರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ.
ಕಳೆದ 24 ಗಂಟೆಗಳಲ್ಲಿ ಶ್ರೀನಗರದಲ್ಲಿ ನಡೆದ ಎರಡನೇ ಉಗ್ರರ ದಾಳಿ ಇದಾಗಿದೆ. ರವಿವಾರ ನಗರದ ಬಟ್ಮಾಲೂ ಪ್ರದೇಶದಲ್ಲಿ ಭಯೋತ್ಪಾದಕರು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





