ಡಿ.10ರಂದು ವಿಧಾನಪರಿಷತ್ತಿನ 25 ಸದಸ್ಯರ ಸ್ಥಾನಕ್ಕೆ ಚುನಾವಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.9: ರಾಜ್ಯ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ 25 ಸದಸ್ಯರ ಅಧಿಕಾರ ಅವಧಿಯು 2022ರ ಜ.5ರಂದು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ.
ಚುನಾವಣಾ ಅಧಿಸೂಚನೆಯೂ ನ.16ರಂದು ಹೊರಡಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ನ.23 ಕೊನೆಯ ದಿನವಾಗಿದೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ನ.26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಡಿ.14ರಂದು ಮತಗಳ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶ ಪ್ರಕಟಿಸಲಾಗುವುದು.
ಬೀದರ್ ಜಿಲ್ಲೆಯಿಂದ ವಿಜಯ್ ಸಿಂಗ್(ಕಾಂಗ್ರೆಸ್), ಗುಲ್ಬರ್ಗ ಜಿಲ್ಲೆಯಿಂದ ಬಿ.ಜಿ.ಪಾಟೀಲ್(ಬಿಜೆಪಿ), ಬಿಜಾಪುರ ಜಿಲ್ಲೆಯಿಂದ ಎಸ್.ಆರ್.ಪಾಟೀಲ್(ಕಾಂಗ್ರೆಸ್), ಸುನೀಲ್ ಗೌಡ(ಕಾಂಗ್ರೆಸ್), ಬೆಳಗಾವಿ ಜಿಲ್ಲೆಯಿಂದ ಮಹಾಂತೇಶ್ ಕವಟಗಿಮಠ(ಬಿಜೆಪಿ), ವಿವೇಕ್ರಾವ್ ಪಾಟೀಲ್(ಪಕ್ಷೇತರ), ಉತ್ತರ ಕನ್ನಡ ಜಿಲ್ಲೆಯಿಂದ ಶ್ರೀಕಾಂತ ಘೋಟ್ನೇಕರ(ಕಾಂಗ್ರೆಸ್), ಧಾರವಾಡ ಜಿಲ್ಲೆಯಿಂದ ಪ್ರದೀಪ್ ಶೆಟ್ಟರ್(ಬಿಜೆಪಿ) ಹಾಗೂ ಶ್ರೀನಿವಾಸ್ ಮಾನೆ(ಕಾಂಗ್ರೆಸ್).
ರಾಯಚೂರು ಜಿಲ್ಲೆಯಿಂದ ಬಸವರಾಜ ಪಾಟೀಲ್ ಇಟಗಿ(ಕಾಂಗ್ರೆಸ್), ಬಳ್ಳಾರಿ ಜಿಲ್ಲೆಯಿಂದ ಕೆ.ಸಿ.ಕೊಂಡಯ್ಯ(ಕಾಂಗ್ರೆಸ್), ಚಿತ್ರದುರ್ಗ ಜಿಲ್ಲೆಯಿಂದ ಜಿ.ರಘು ಆಚಾರ್(ಕಾಂಗ್ರೆಸ್), ಶಿವಮೊಗ್ಗ ಜಿಲ್ಲೆಯಿಂದ ಆರ್.ಪ್ರಸನ್ನ ಕುಮಾರ್(ಕಾಂಗ್ರೆಸ್), ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆ.ಪ್ರತಾಪ್ಚಂದ್ರ ಶೆಟ್ಟಿ(ಕಾಂಗ್ರೆಸ್), ಕೋಟ ಶ್ರೀನಿವಾಸ್ ಪೂಜಾರಿ(ಬಿಜೆಪಿ), ಚಿಕ್ಕಮಗಳೂರು ಜಿಲ್ಲೆಯಿಂದ ಎಂ.ಕೆ.ಪ್ರಾಣೇಶ್(ಬಿಜೆಪಿ).
ಹಾಸನ ಜಿಲ್ಲೆಯಿಂದ ಎಂ.ಎ.ಗೋಪಾಲಸ್ವಾಮಿ(ಕಾಂಗ್ರೆಸ್), ತುಮಕೂರು ಜಿಲ್ಲೆಯಿಂದ ಬೆಮೆಲ್ ಕಾಂತರಾಜ್(ಜೆಡಿಎಸ್), ಮಂಡ್ಯ ಜಿಲ್ಲೆಯಿಂದ ಎನ್.ಅಪ್ಪಾಜಿಗೌಡ(ಜೆಡಿಎಸ್), ಬೆಂಗಳೂರು ಜಿಲ್ಲೆಯಿಂದ ಎಂ.ನಾರಾಯಣಸ್ವಾಮಿ(ಕಾಂಗ್ರೆಸ್), ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಎಸ್.ರವಿ(ಕಾಂಗ್ರೆಸ್), ಕೋಲಾರ ಜಿಲ್ಲೆಯಿಂದ ಸಿ.ಆರ್.ಮನೋಹರ್(ಜೆಡಿಎಸ್), ಕೊಡಗು ಜಿಲ್ಲೆಯಿಂದ ಎಂ.ಪಿ.ಸುನೀಲ್ ಸುಬ್ರಮಣಿ(ಬಿಜೆಪಿ), ಮೈಸೂರು ಜಿಲ್ಲೆಯಿಂದ ಆರ್.ಧರ್ಮಸೇನಾ(ಕಾಂಗ್ರೆಸ್) ಹಾಗೂ ಸಂದೇಶ್ ನಾಗರಾಜ್(ಜೆಡಿಎಸ್) ಅಧಿಕಾರ ಅವಧಿ ಪೂರ್ಣಗೊಳ್ಳುತ್ತಿದೆ.







