ಹರೇಕಳ ಹಾಜಬ್ಬರ ಕುರಿತು ವೀಡಿಯೊ ವರದಿ ಪ್ರಕಟಿಸಿದ ಬಿಬಿಸಿ

ಸೋಮವಾರದಂದು ಹೊಸದಿಲ್ಲಿಯಲ್ಲಿ ಭಾರತೀಯ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಂದ ಮಂಗಳೂರಿನ ಹರೇಕಳದ ಹಾಜಬ್ಬ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ವೇಳೆ ಬರಿಗಾಲಿನಲ್ಲಿ ತೆರಳಿ ಪ್ರಶಸ್ತಿ ಸ್ವೀಕರಿಸಿದ ಹಾಜಬ್ಬರ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು. ಇದೀಗ ಹಾಜಬ್ಬರ ಕುರಿತು ಪ್ರತಿಷ್ಠಿತ ಬಿಬಿಸಿ ನ್ಯೂಸ್ ಹಿಂದಿ ವಾಹಿನಿಯು ವೀಡಿಯೊ ವರದಿ ಪ್ರಕಟಿಸಿದೆ.
ಈ ಹಿಂದೆ 2012ರಲ್ಲೂ ಹರೇಕಳ ಹಾಜಬ್ಬರ ಕುರಿತು ಬಿಬಿಸಿ ವಾಹಿನಿ ವರದಿ ಪ್ರಕಟಿಸಿತ್ತು. "ಯಾವುದೇ ಸದ್ದಿಲ್ಲದೇ ತಮ್ಮ ಸಾಧನೆಯ ಮೂಲಕ ಸುದ್ದಿಯಾಗುವವರು" ಎಂದು ಬಿಬಿಸಿಯು ಹಾಜಬ್ಬರನ್ನು ಬಣ್ಣಿಸಿದೆ. ಅವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತ ರೂಪದಲ್ಲಿ ವೀಕ್ಷಕರ ಮುಂದಿರಿಸಿದೆ.
Next Story