ಎಸ್.ಎಸ್.ಫ್ರೆಂಡ್ಸ್ ಮುಲ್ಕಿ ತಂಡಕ್ಕೆ ಜಿಎಸ್‌ಬಿ ಟ್ರೋಫಿ

ಉಡುಪಿ, ನ.9: ಉಡುಪಿಯ ತೆಂಕಪೇಟೆ ಫ್ರೆಂಡ್ಸ್ ಆಶ್ರಯದಲ್ಲಿ ಶನಿವಾರ ಬೀಡಿನಗುಡ್ಡೆ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಎಸ್.ಎಸ್. ಫ್ರೆಂಡ್ಸ್ ಮುಲ್ಕಿ ತಂಡವು ಜಿಎಸ್‌ಬಿ ಟ್ರೋಫಿಯನ್ನು ಗೆದ್ದುಕೊಂಡಿತು.
ಎರಡು ದಿನಗಳ ಈ ಪಂದ್ಯಕೂಟದಲ್ಲಿ ಜಿಎಸ್‌ಬಿ ಸಮಾಜದ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಜಿಎಸ್‌ಬಿ ಫ್ರೆಂಡ್ಸ್ ಹರಿಖಂಡಿಗೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಪಂದ್ಯಕೂಟವನ್ನು ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ ಉದ್ಘಾಟಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸಮಾಜ ಸೇವಕ ಪ್ರದೀಪ್ ರಾವ್, ಜಿಎಸ್‌ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ, ಕ್ರಿಕೆಟ್ ಆಟಗಾರ ಡಾ.ವಿನೋದ್ ನಾಯಕ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಜಗದೀಶ ಕಾಮತ್, ಡಾ.ನರೇಂದ್ರ ಶೆಣೈ, ಡಾ.ರಾಜೇಶ್ ಭಕ್ತ ಬಹುಮಾನ ವಿತರಿಸಿದರು. ರವಿ ಕಡಿಯಾಳಿ ಕಾರ್ಯಕ್ರಮ ನಿರೂಪಿಸಿದರು.
Next Story





