ದ.ಕ. ಜಿಲ್ಲೆ : ಕೋವಿಡ್ಗೆ ಓರ್ವ ಬಲಿ, 21 ಮಂದಿಗೆ ಕೊರೋನ ಸೋಂಕು
![ದ.ಕ. ಜಿಲ್ಲೆ : ಕೋವಿಡ್ಗೆ ಓರ್ವ ಬಲಿ, 21 ಮಂದಿಗೆ ಕೊರೋನ ಸೋಂಕು ದ.ಕ. ಜಿಲ್ಲೆ : ಕೋವಿಡ್ಗೆ ಓರ್ವ ಬಲಿ, 21 ಮಂದಿಗೆ ಕೊರೋನ ಸೋಂಕು](https://www.varthabharati.in/sites/default/files/images/articles/2021/11/9/313143-1636469615.jpg)
ಮಂಗಳೂರು, ನ. 9: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಸೋಂಕಿಗೆ ಓರ್ವ ಬಲಿಯಾಗಿದ್ದು, ಹೊಸದಾಗಿ 21 ಮಂದಿಗೆ ಸೋಂಕು ದೃಢಪಟ್ಟಿದೆ. 27 ಮಂದಿ ಗುಣಮುಖರಾಗಿದ್ದಾರೆ.
ಪಾಸಿಟಿವಿಟಿ ದರ ಶೇ.0.43 ದಾಖಲಾಗಿದೆ. 1,15,603 ಸೋಂಕಿತರ ಪೈಕಿ 1,13,777ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ನಿಂದಾಗಿ 1,690 ಮಂದಿ ಮೃತಪಟ್ಟಿದ್ದಾರೆ. ಸದ್ಯ 136 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ 88,646ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು,1,07,57,570ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story