ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ನ್ಯೂಪಡ್ಪು ಪ್ರೌಢಶಾಲೆಯಲ್ಲಿ ಸನ್ಮಾನ

ಮಂಗಳೂರು, ನ.9: ಪದ್ಮ ಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಸಾಧನೆ ದ.ಕ. ಜಿಲ್ಲಾ ಶಿಕ್ಷಣ ಇಲಾಖೆಗೆ ಸಂದ ಗೌರವ ಎಂದು ಡಿಡಿಪಿಐ ಜಿ.ಮಲ್ಲೇಸ್ವಾಮಿ ಹೇಳಿದ್ದಾರೆ.
ಹರೇಕಳ ನ್ಯೂಪಡ್ಪು ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಸನ್ಮಾನ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ಸನ್ಮಾನಿಸಿ ಮಾತನಾಡಿದರು.
ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಹರೇಕಳ, ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ. ಪ್ರಶಾಂತ್ ನಾಯ್ಕಾ, ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ರಾಜ್, ತಾಲೂಕು ಸಮನ್ವಯ ಅಧಿಕಾರಿ ಡಾ. ಪ್ರಶಾಂತ್ ಕುಮಾರ್, ಮ್ಮುದ್ ಮೋನು, ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ, ರಫೀಕ್ ಮಾಸ್ಟರ್, ಪಜೀರು ಚರ್ಚ್ ಉಪಾಧ್ಯಕ್ಷ ರಿಚರ್ಡ್, ಜುಮಾ ಮಸೀದಿಯ ಟಿ.ಖಾಲಿದ್ , ದೇರಳಕಟ್ಟೆಯ ಫಾಹಿಮಾ ಇಂಟರ್ ನ್ಯಾಷನಲ್ ಟ್ರಾವೆಲ್ ಸಂಸ್ಥೆಯ ಪಾಲುದಾರ ಕಲಂದರ್, ಗ್ರಾಪಂ ಉಪಾಧ್ಯಕ್ಷೆ ಕಲ್ಯಾಣಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾಧರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಸಿಪಿ ಮಹೇಶ್ ಕುಮಾರ್ ಹಾಜಬ್ಬರ ಪರಿಚಯ ಮಾಡಿದರು. ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ತಾಪಂ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಹರೇಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
''ವೈಯಕ್ತಿಕವಾಗಿ ತನಗೋಸ್ಕರ ಯಾರಿಂದಲೂ ಕಿಂಚಿತ್ತೂ ಸಹಾಯ ಯಾಚಿಸದ, ಎಲ್ಲವನ್ನು ಪ್ರೀತಿಯ ಶಾಲೆಗಾಗಿ ಅರ್ಪಿಸಿದ ಮಹಾನ್ ವ್ಯಕ್ತಿತ್ವದ ಹರೇಕಳ ಹಾಜಬ್ಬರಿಗೆ ದೇರಳಕಟ್ಟೆಯ ಫಾಹಿಮಾ ಇಂಟರ್ ನ್ಯಾಷನಲ್ ವತಿಯಿಂದ ಉಚಿತ ಹಜ್ ಮತ್ತು ಉಮ್ರಾ ಪ್ರವಾಸ ವ್ಯವಸ್ಥೆ ಕೊಡುಗೆ ನೀಡುತ್ತೇವೆ''.
- ಕಲಂದರ್ ಪಾಲುದಾರರು, ಫಾಹಿಮಾ ಇಂಟರ್ ನ್ಯಾಷನಲ್ ದೇರಳಕಟ್ಟೆ






.jpeg)


