ನ.12ರಿಂದ ಮೂರು ದಿನ ಮಂಗಳೂರಿಗೆ ನೀರಿಲ್ಲ

ಮಂಗಳೂರು, ನ.9: ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್ 1-18ಎಂಎನ್‌ಡಿ ರೇಚಕ ಸ್ಥಾವರದ ಜಾಕ್‌ವೆಲ್ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ನ.12ರಂದು ಬೆಳಗ್ಗೆ 6ರಿಂದ ನ.14ರ ಬೆಳಗ್ಗೆ 6ರವರೆಗೆ ಸುರತ್ಕಲ್, ಕಾಟಿಪಳ್ಳ, ಎನ್‌ಐಟಿಕೆ, ಎಂಸಿಎಫ್, ಕೂಳೂರು, ಕಾವೂರು, ಕೋಡಿಕಲ್ ಭಾಗಶಃ, ಪಿವಿಎಸ್, ಲೇಡಿಹಿಲ್, ಬಂದರ್, ಕಾರ್‌ಸ್ಟ್ರೀಟ್, ಕುದ್ರೋಳಿ, ಬೋಳೂರು, ಮೇರಿಹಿಲ್, ಪಚ್ಚನಾಡಿ, ಅಶೋಕ ನಗರ, ದೇರೆಬೈಲ್, ಕೋಡಿಯಾಲ್ ಬೈಲ್ ಹಾಗೂ ಕದ್ರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





