ಉಪ್ಪಿನಂಗಡಿ : ನಿವೃತ್ತ ಯೋಧನ ಮನೆದಾರಿಯಲ್ಲಿ ಪತ್ತೆಯಾದ ಗ್ರೆನೇಡ್ಗಳ ನಿಷ್ಕ್ರಿಯ

ಇಳಂತಿಲದಲ್ಲಿ ಪತ್ತೆಯಾಗಿರುವ ಗ್ರೆನೇಡ್ ಗಳು
ಉಪ್ಪಿನಂಗಡಿ, ನ.9: ಇಳಂತಿಲ ಎಂಬಲ್ಲಿ ಕಳೆದ ಶನಿವಾರ ನಿವೃತ್ತ ಸೇನಾ ಸಿಬ್ಬಂದಿ ಜಯಕುಮಾರ್ ಪೂಜಾರಿ ಎಂಬವರ ಮನೆಗೆ ಹೋಗುವ ದಾರಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಐದು ಗ್ರೆನೇಡ್ಗಳನ್ನು ಇಂದು ನೆಲ್ಯಾಡಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಹಕಾರದಲ್ಲಿ ನಿಷ್ಕ್ರಿಯಗೊಳಿಸಲಾಗಿದೆ.
ಪುತ್ತೂರು ಡಿವೈಎಸ್ಪಿಗಾನ ಪಿ.ಕುಮಾರ್, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಗುಪ್ತದಳ ವಿಭಾಗದ ಇನ್ಸ್ಪೆಕ್ಟರ್ ನಂದಕುಮಾರ್, ಬಾಂಬ್ ನಿಷ್ಕ್ರಿಯ ದಳದ ಸಂತೋಷ್ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲ ಐದು ಗ್ರೆನೇಡ್ಗಳನ್ನು ನಿಷ್ಕ್ರಿಯಗೊಳಿಸಲಾಯಿತು.
ಸುಮಾರು 40 ವರ್ಷಗಳ ಹಳೆಯದೆನ್ನಲಾದ ಈ ಗ್ರೆನೇಡ್ಗಳ ಭಾಗಗಳನ್ನು ಪರೀಕ್ಷೆಗೆ ಒಳಪಡಿಸಲು ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಇದು ಎಲ್ಲಿಗೆ ರವಾನೆಯಾಗಿದ್ದ ಗ್ರೆನೇಡ್ಗಳೆನ್ನುವುದು ತಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Next Story





