9 ಕೋಟಿ ಹಣ ಬಾಕಿ ಉಳಿಸಿಕೊಂಡ ಬಿಎಂಟಿಸಿ: ಸಾರಿಗೆ ನೌಕರರ ಸಂಘ ಆರೋಪ
ಬೆಂಗಳೂರು, ನ.9: ಬಿಎಂಟಿಸಿ ನೌಕರರ ಪಿಎಫ್ ಹಣವನ್ನು ಸಂಸ್ಥೆಯು ಪಾವತಿ ಮಾಡುತ್ತಿಲ್ಲ. ಎಲ್‌ಐಸಿಗೆ ಕಟ್ಟಬೇಕಾಗಿರುವ ಸುಮಾರು 9 ಕೋಟಿ ಹಣವನ್ನು ತನ್ನಲೇ ಉಳಿಸಿಕೊಂಡಿದೆ ಎಂದು ಸಾರಿಗೆ ನೌಕರರ ಸಂಘ ಆರೋಪಿಸಿದೆ.
ದೇಶದಲ್ಲಿ ಅತ್ಯುತ್ತಮ ಸಾರಿಗೆ ಸೇವೆಯನ್ನು ಒದಗಿಸುತ್ತಿರುವ ಬಿಎಂಟಿಸಿ ತನ್ನ ನೌಕರರ ಯೋಗಕ್ಷೇಮದ ಕುರಿತು ಕಾಳಜಿ ತೋರಿಸುತ್ತಿಲ್ಲ. ನೌಕರರಿಗೆ ಅನಾಹುತ ಸಂಭವಿಸಿದರೆ ಸೂಕ್ತ ಪರಿಹಾರವು ಸಹ ನೌಕರರಿಗೆ ಸಿಗುವುದಿಲ್ಲ ಎಂದು ತಿಳಿಸಿದೆ.
ಇನ್ನು ನಗರದಲ್ಲಿ ಬಿಎಂಟಿಸಿ ಬಸ್ಸುಗಳು ಕನಿಷ್ಠ ಪ್ರಯಾಣಿಕರಿಲ್ಲದೆ ಸಂಚರಿಸುತ್ತಿರುವುದರಿಂದ ಸಂಸ್ಥೆಯು ನಷ್ಟ ಅನುಭವಿಸುತ್ತಿದೆ. ಹಾಗಾಗಿ ಬಿಎಂಟಿಸಿ ತನ್ನ ನೌಕರರಿಗೆ ಅರ್ಧ ಸಂಬಳವನ್ನು ನೀಡುತ್ತಿದೆ. ಆದರೆ ರಾಜ್ಯ ಸರಕಾರವು ಕಾಲಕಾಲಕ್ಕೆ ಬಿಎಂಟಿಸಿ ನೌಕರರ ವೇತನಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಆದರೂ ಸಂಸ್ಥೆಯು ತನ್ನ ನೌಕರರ ಕ್ಷೇಮಾಭಿವೃದ್ಧಿಯನ್ನು ಕಡೆಗಣಿಸಿ, ನೌಕರರನ್ನು ಆತಂಕಕ್ಕೀಡು ಮಾಡಿದೆ ಎಂದು ತಿಳಿಸಿದೆ.
Next Story





