ಸಿದ್ದರಾಮಯ್ಯ ಸಹಿತ ಹಲವು ಮುಖಂಡರಿಂದ ಜನತೆಗೆ ಟಿಪ್ಪು ಜಯಂತಿ ಶುಭಾಶಯ

ಮಂಗಳೂರು, ನ.10: ಇಂದು 'ಮೈಸೂರಿನ ಹುಲಿ' ಟಿಪ್ಪು ಸುಲ್ತಾನ್ ಜಯಂತಿ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಹಿತ ಹಲವು ಗಣ್ಯರು ನಾಡಿನ ಜನತೆಗೆ ಟಿಪ್ಪು ಜಯಂತಿಯ ಶುಭಾಶಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡಳಿತಗಾರ ಮತ್ತು ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ. ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ. ನಾಡ ಬಂಧುಗಳಿಗೆ ಟಿಪ್ಪು ಜಯಂತಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಅದೇರೀತಿ ಬಿ.ಕೆ.ಹರಿಪ್ರಸಾದ್, ಮೈಸೂರಿನ ಹುಲಿ ಹಝರತ್ ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.
ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಹೋರಾಡಿ ಸ್ವಾತಂತ್ರ್ಯಕ್ಕಾಗಿ ರಣಾಂಗಣದಲ್ಲೇ ಮಡಿದ ಭಾರತದ ಮೊದಲ ರಾಜ, ದೂರದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ, ಪ್ರಗತಿಪರ ಆಡಳಿತಗಾರ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದು ಟ್ವೀಟ್ ಮಾಡಿದೆ.
ಉಳಿದಂತೆ ಮಾಜಿ ಸಚಿವ, ಶಾಸಕ ಝಮೀರ್ ಅಹ್ಮದ್ ಖಾನ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ರಿಝ್ವಾನ್ ಅರ್ಷದ್ ಮೊದಲಾದವರು ನಾಡಿನ ಜನತೆಗೆ ಟಿಪ್ಪು ಜಯಂತಿಯ ಶುಭ ಹಾರೈಸಿದ್ದಾರೆ.
ಅಪ್ರತಿಮ
— Siddaramaiah (@siddaramaiah) November 10, 2021
ಸ್ವಾತಂತ್ರ್ಯ ಸೇನಾನಿ,
ದಕ್ಷ ಆಡಳಿತಗಾರ
ಮತ್ತು
ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ.
ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ
ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ.
ನಾಡ ಬಂಧುಗಳಿಗೆ
ಟಿಪ್ಪು ಜಯಂತಿಯ ಶುಭಾಶಯಗಳು.#TippuJayanthi #ಟಿಪ್ಪುಜಯಂತಿ pic.twitter.com/hlDYFnvPFc
ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು.#TippuSultan #TippuJayanti
— Hariprasad.B.K. (@HariprasadBK2) November 10, 2021
ನಾಡಿನ ಸಮಸ್ತ ಬಂಧುಗಳಿಗೆ ಸ್ವಾತಂತ್ರ್ಯ ಸೇನಾನಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.#TippuJayanthi pic.twitter.com/4nWAW4TVCG
— Dr Yathindra Siddaramaiah (@Dr_Yathindra_S) November 10, 2021
ಬ್ರಿಟೀಷರ ಸರ್ವಾಧಿಕಾರಿ ಆಡಳಿತದ ವಿರುದ್ಧ ಸೆಟೆದು ನಿಂತು, ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಮಹಾನ್ ದೇಶಪ್ರೇಮಿ ಹಜ್ರತ್ ಟಿಪ್ಪು ಸುಲ್ತಾನ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ, ನನ್ನ ಗೌರವ ನಮನಗಳನ್ನು ಅರ್ಪಿಸುತ್ತೇನೆ.#TippuJayanthi pic.twitter.com/6B2l2kerRv
— B Z Zameer Ahmed Khan (@BZZameerAhmedK) November 10, 2021







