ಬೆಂಗಳೂರು: ಸೆಕ್ಯೂರಿಟಿ ಸಿಬ್ಬಂದಿಯಿಂದ ಅಪಾರ್ಟ್ ಮೆಂಟ್ ನಿವಾಸಿಯ ಹತ್ಯೆ

ಭಾಸ್ಕರ್ ರೆಡ್ಡಿ (ಎಡಚಿತ್ರ) ಬಸಂತ್
ಬೆಂಗಳೂರು, ನ.10: ಅಪಾರ್ಟ್ ಮೆಂಟ್ ಸೆಕ್ಯೂರಿಟಿಯೊಬ್ಬ ಅದೇ ಅಪಾರ್ಟ್ ಮೆಂಟ್ ನಿವಾಸಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಎಚ್.ಎ.ಎಲ್. ಠಾಣಾ ವ್ಯಾಪ್ತಿ ಎಇಸಿಎಸ್ ಲೇಔಟಿನಲ್ಲಿ ನಡೆದಿರುವುದು ವರದಿಯಾಗಿದೆ.
ಅಪಾರ್ಟ್ ಮೆಂಟ್ ನಿವಾಸಿ ಭಾಸ್ಕರ್ ರೆಡ್ಡಿ (65) ಹತ್ಯೆಯಾದ ವ್ಯಕ್ತಿ. ಸೆಕ್ಯೂರಿಟಿ ಸಿಬ್ಬಂದಿ ಬಸಂತ್ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಸಂತ್ ಅತಿಯಾದ ಮದ್ಯಪಾನ ಮಾಡಿ ಸೆಕ್ಯುರಿಟಿ ಕೆಲಸಕ್ಕೆ ಬರುತ್ತಿದ್ದನೆನ್ನಲಾಗಿದ್ದು, ಇದಕ್ಕೆ ಭಾಸ್ಕರ್ ರೆಡ್ಡಿ ವಿರೋಧ ವ್ಯಕ್ತಪಡಿಸುತ್ತಿದ್ದರೆನ್ನಲಾಗಿದೆ. ಇದರಿಂದ ಕೋಪಗೊಂಡು ಆರೋಪಿ ಬಸಂತ್ ಚಾಕುವಿನಿಂದ ಇರಿದು ಭಾಸ್ಕರ್ ರೆಡ್ಡಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಎಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





