ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಆರೋಪ: 6 ಮಂದಿಯ ಬಂಧನ

ಬೆಂಗಳೂರು, ನ.10: ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರೋಪದಡಿ 6 ಮಂದಿಯನ್ನು ಹೊಸಕೋಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆವಲಹಳ್ಳಿ ಮೂಲದ ಅಜಯ್ ಕುಮಾರ್, ಜ್ಞಾನಮೂರ್ತಿ, ರವಿಚಂದ್ರ, ಮುರುಗೇಶ್, ಮುನಿರಾಜು, ಮತ್ತು ಶಿವಮೊಗ್ಗ ಮೂಲದ ಕುಮಾರಸ್ಚಾಮಿ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ 2 ಕಾರು, ವಾಕಿಟಾಕಿ, 6 ಮೊಬೈಲ್, ಮಿಲಿಟರಿ ಟೋಪಿ, 10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಆರೋಪಿಗಳು ರಸ್ತೆ ಮಧ್ಯೆ ಪೊಲೀಸರಂತೆ ವಾಕಿಟಾಕಿ, ಮಿಲ್ಟ್ರಿ ಕ್ಯಾಪ್ ಮತ್ತು ಲಾಠಿ ತೆಗೆದುಕೊಂಡು ಬಂದು ಬೆದರಿಸಿ, ಹಣ, ಮೊಬೈಲ್ ಕಿತ್ತುಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Next Story





