ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ವಕೀಲರೊಂದಿಗೆ ಚರ್ಚೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ನ.10: ಅಂತರ್‍ರಾಜ್ಯ ಜಲ ವಿವಾದಗಳ ಕುರಿತು ವಕೀಲರು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲು ಹೊಸದಿಲ್ಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಹೊಸದಿಲ್ಲಿಗೆ ತೆರಳುವ ಮುನ್ನ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಮಯ ಕೋರಲಾಗಿದೆ. ಬಹುಷಃ ನಾಳೆ ಸಮಯ ಸಿಗಬಹುದು ಎಂದರು.
ಕೇಂದ್ರ ಸಚಿವರಿಗೆ ರಾಜ್ಯದ ಯೋಜನೆಗಳ ಬಗ್ಗೆ, ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸಲಾಗುವುದು. ಕೃಷ್ಣಾ ಹಾಗೂ ಕಾವೇರಿ ವಿಚಾರದಲ್ಲಿ ಇರುವ ಪ್ರಕರಣಗಳ ಪ್ರಗತಿ ಕುರಿತು ಚರ್ಚಿಸುವುದಾಗಿ ಅವರು ಹೇಳಿದರು.
Next Story





