ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಉಡುಪಿ, ನ.10: ಮಣಿಪಾಲ ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆಯ 18ನೇ ವಾರ್ಷಿಕ ಮಹಾಸಭೆಯು ರವಿವಾರ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್.ನಾಯಕ್ ವಹಿಸಿದ್ದರು. ಜೊತೆಕಾರ್ಯದರ್ಶಿ ಜಯಶ್ರೀ ಜಿ.ನಾಯಕ್ ವರದಿ ವಾಚಿಸಿದರು. ಕೋಶಾಧಿಕಾರಿ ಗೀತಾ ಎಸ್.ನಾಯಕ್ ಲೆಕ್ಕಪತ್ರ ಮಂಡಿಸಿದರು.
ಈ ಸಂದಭರ್ದಲ್ಲಿ ಸಿ.ಎ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಸಮಾಜದ ಯುವ ಪ್ರತಿಭೆಗಳಾದ ಶಶಾಂಕ್, ಸಂತೋಷ್, ಭೂಮಿಕಾ, ಸುಬ್ರಹ್ಮಣ್ಯ, ಸುಪ್ರೀತಾ, ಶ್ರೀಕಾಂತ್, ರಜತ್ ಹಾಗೂ ಜೆಇಇ ಪರೀಕ್ಷೆಯಲ್ಲಿ ದೇಶದಲ್ಲಿ 16ನೆ ರ್ಯಾಂಕ್ ಗಳಿಸಿದ ಅಭಯ್ ಅವರನ್ನು ಸನ್ಮಾನಿಸಲಾಯಿತು.
ಆನ್‌ಲೈನ್ ಕಾರ್ಯಕ್ರಮ ನೀಡಿದ ಡಾ.ಅಕ್ಷತಾ, ಡಾ.ರಶ್ಮೀ, ವೇದಿಕೆಯ ಲೋಗೋ ರಚಿಸಿದ ಸ್ತುತಿ ನಾಯಕ್ ಅವರನ್ನು ಅಭಿನಂದಿಸಲಾಯಿತು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಅಕ್ಷತಾ ನಾಯಕ್, ಗೌರವಾಧ್ಯಕ್ಷೆ ಸುನೀತಾ ನಾಯಕ್ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ನಿರ್ಮಲಾ ಜಿ.ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಡಾ.ವಿದ್ಯಾ ಲತಾ ವಂದಿಸಿದರು. ರೂಪಾ ನಾಯಕ್ ಹಾಗೂ ಸುಮಿತ್ರಾ ನಾಯಕ್ ನಿರೂಪಿಸಿದರು.







