ಶಿಶುರೋಗ ತಜ್ಞೆ ಡಾ.ಚೈತ್ರಾಗೆ ಪ್ರಥಮ ರ‍್ಯಾಂಕ್

ಉಡುಪಿ, ನ.10: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾ ನಿಲಯವು 2021ರ ಜುಲೈ ತಿಂಗಳಲ್ಲಿ ನಡೆಸಿದ ಎಂ.ಡಿ. ಪಿಡಿಯಾಟ್ರಿಕ್ಸ್‌ನಲ್ಲಿ ಮಂಗಳೂರು ಎ.ಜೆ. ವೈದ್ಯಕೀಯ ಕಾಲೇಜಿನ ಡಾ.ಚೈತ್ರಾ ಪಿ. ಪ್ರಥಮ ರ‍್ಯಾಂಕ್ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಸುಳ್ಯದ ರೋಟರಿ ಶಾಲೆ ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ಇವರು, ಹಾಸನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಗಳಿಸಿದ್ದಾರೆ. ಇವರು ದೇವಲಂಪಾಡಿಯಲ್ಲಿರುವ ಪಡಾರು ತಿರುಮಲೇಶ್ ಭಟ್ ಮತ್ತು ಜಯಶ್ರೀ ಭಟ್ ಅವರ ಪುತ್ರಿ ಹಾಗೂ ಮಂಗಳೂರು ಹೃದಯ ರೋಗ ತಜ್ಞ ಡಾ.ಭರತೇಶ ಯು.ಜಿ ಅವರ ಪತ್ನಿ.
Next Story





