ಯಶಸ್ ಸುವರ್ಣಗೆ ಚಾಣಕ್ಯ ಚಿಲ್ಡ್ರನ್ಸ್ ಅವಾರ್ಡ್

ಹೆಬ್ರಿ, ನ.10: ಮಕ್ಕಳ ದಿನಾಚರಣೆಯ ಅಂಗವಾಗಿ ಹೆಬ್ರಿಯ ಚಾಣಕ್ಯ ಎಜ್ಯುಕೇಷನ್ ಕಲ್ಚರಲ್ ಅಕಾಡೆಮಿ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ನೀಡಲಾಗುವ ಪ್ರತಿಷ್ಠಿತ ಚಾಣಕ್ಯ ಚಿಲ್ಡ್ರನ್ಸ್ ಅವಾರ್ಡ್‌ಗೆ ಈ ಬಾರಿ ಬಾಲ ಪ್ರತಿಭೆ, ಕೊಳಲುವಾದಕ, ಗಾಯಕ 8ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ಪ್ರೀತಿ ಪಿ.ಸುವರ್ಣ ದಂಪತಿಯ ಪುತ್ರನಾಗಿರುವ ಯಶಸ್ ಪಿ.ಸುವರ್ಣ ಪ್ರಸ್ತುತ ಕಿನ್ನಿಮೂಲ್ಕಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೆ ತರಗತಿ ವಿದ್ಯಾರ್ಥಿ. ಮಕ್ಕಳ ದಿನಾಚರಣೆಯಂದು ಈ ಪ್ರಶಸ್ತಿ ಪ್ರದಾನ ಮಾಡಲಾಗು ವುದು ಎಂದು ಪ್ರಕಟಣೆ ತಿಳಿಸಿದೆ.
Next Story





