ವಿಶ್ವಕಪ್ ಮೊದಲ ಸೆಮಿ ಫೈನಲ್:ನ್ಯೂಝಿಲ್ಯಾಂಡ್ ಗೆ 167 ರನ್ ಗುರಿ ನೀಡಿದ ಇಂಗ್ಲೆಂಡ್
ಆಲ್ ರೌಂಡರ್ ಮೊಯಿನ್ ಅಲಿ ಔಟಾಗದೆ 51

ಅಬುಧಾಬಿ, ನ.10: ಆಲ್ ರೌಂಡರ್ ಮೊಯಿನ್ ಅಲಿ ಅರ್ಧಶತಕದ (ಔಟಾಗದೆ 51, 37 ಎಸೆತ, 3 ಬೌಂಡರಿ, 2 ಸಿಕ್ಸರ್ ) ಕೊಡುಗೆಯ ನೆರವಿನಿಂದ ಇಂಗ್ಲೆಂಡ್ ತಂಡವು ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಮೊದಲ ಸೆಮಿ ಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ತಂಡದ ಗೆಲುವಿಗೆ 167 ರನ್ ಗುರಿ ನೀಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ.
ಆರಂಭಿಕ ಬ್ಯಾಟ್ಸ್ ಮನ್ ಗಳಾದ ಜೋಸ್ ಬಟ್ಲರ್(29) ಹಾಗೂ ಜಾನಿ ಬೈರ್ ಸ್ಟೋವ್(13) ಮೊದಲ ವಿಕೆಟಿಗೆ 37 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು. ಡೇವಿಡ್ ಮಲಾನ್(41, 30 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಮೊಯಿನ್ ಅಲಿ 3ನೇ ವಿಕೆಟಿಗೆ 63 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಮಲಾನ್ ಔಟಾದ ಬಳಿಕ ಲಿವಿಂಗ್ ಸ್ಟೋನ್ (17, 10 ಎಸೆತ) ಜೊತೆ ಕೈಜೋಡಿಸಿದ ಮೊಯಿನ್ ಅಲಿ 4ನೇ ವಿಕೆಟ್ ಗೆ 40 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ 150ರ ಗಡಿ ದಾಟಿಸಿದರು.
ಅಲಿ 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಪೂರೈಸಿದರು.
ಜೇಮ್ಸ್ ನಿಶಾಮ್( 1-18) ,ಟಿಮ್ ಸೌಥಿ(1-24), ಮಿಲ್ನೆ(1-31), ಐಶ್ ಸೋಧಿ(1-32)ತಲಾ ಒಂದು ವಿಕೆಟ್ ಪಡೆದರು.