ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಸಮಾರೋಪ

ಉಳ್ಳಾಲ: ಲಯನ್ಸ್ ಕ್ಲಬ್ ಪೆರ್ಮನ್ನೂರು ಪೋಕಾಸ್ ತೊಕ್ಕೋಟ್ಟು ಇದರ ಆಶ್ರಯದಲ್ಲಿ ರಿಚೆಲ್ ಚಾರಿಟೇಬಲ್ ಟ್ರಸ್ಟ್ ಭಟ್ನಗರ್ ಹಾಗೂ ಕಂಪಾನಿಯೋ ಮಂಗಳೂರು ಇದರ ಸಹಯೋಗದೊಂದಿಗೆ ತೊಕ್ಕೋಟ್ಟುವಿನಲ್ಲಿ ನಡೆಯುತ್ತಿದ್ದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಸಮಾರೋಪ ಸಮಾರಂಭ ಬುಧವಾರ ನಡೆಯಿತು.
ಸಿರಿಲ್ ರೋಬರ್ಟ್ ಡಿ ಸೋಜ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಂಪಾನಿಯೊ ಆಡಳಿತ ನಿರ್ದೇಶಕ ಡಾ.ರತ್ನಾಕರ್ ಮಾಹಿತಿ ನೀಡಿದರು. ಫಾದರ್ ಸಿಪ್ರಿನ್ ಪಿಂಟೋ, ಅರುಣ್ ಮೊಂತೆರೋ, ಆರೋಗ್ಯ ಅಧಿಕಾರಿ ವಿದ್ಯಾಸಾಗರ್,ಬಾಜಿಲ್ ಡಿಸೋಜ, ಪ್ರಶಾಂತ್ ಡಿಸೋಜ ಭಾಗವಹಿಸಿ ಫೂಟ್ ಪಲ್ಸ್ ಥೆರಪಿ ಶಿಬಿರ ದ ಬಗೆ ಮಾಹಿತಿ ನೀಡಿದರು.
ಸುನಿತಾ ಪ್ರಾರ್ಥನೆ ಸಲ್ಲಿಸಿದರು. ಶ್ರೀಧರ್ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು. ಅರುಣ್ ಮೊಂತೇರೊ ವಂದಿಸಿದರು.
Next Story





