ರಾಜ್ಯಮಟ್ಟದ ಜೂನಿಯರ್ ಬಾಸ್ಕೆಟ್ ಬಾಲ್ ಚಾಂಪಿಯನ್‌ಷಿಪ್: ಮಂಗಳೂರು ತಂಡ ರನ್ನರ್ ಅಪ್

ಮಂಗಳೂರು : ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅ.22ರಿಂದ ನ.7ರವರೆಗೆ ನಡೆದ ರಾಜ್ಯಮಟ್ಟದ ಜೂನಿಯರ್(18 ವರ್ಷದೊಳಗಿನ) ಬಾಸ್ಕೆಟ್ ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ಬಾಸ್ಕೆಟ್ ಬಾಲ್ ಕ್ಲಬ್ ಜೂನಿಯರ್ ತಂಡವು ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದೆ.
ರಾಜ್ಯದ 45 ತಂಡಗಳು ಪಾಲ್ಗೊಂಡಿದ್ದ ಈ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ಬಾಸ್ಕೆಟ್‌ಬಾಲ್ ಕ್ಲಬ್ ಜೂನಿಯರ್ ತಂಡ ಸೆಮಿ ಫೈನಲ್ ಲೀಗ್‌ನಲ್ಲಿ ಬೀಗಲ್ಸ್ ಬೆಂಗಳೂರು ತಂಡವನ್ನು 76-59 ಪಾಯಿಂಟ್‌ಗಳಿಂದ, ಬಿ.ಸಿ.ಬಿ.ಸಿ. ಬೆಂಗಳೂರು ತಂಡವನ್ನು 89-80 ಪಾಯಿಂಟ್‌ಗಳಿಂದ ಮಣಿಸಿದರೆ, ಡಿವೈಎಸ್‌ಎಸ್ ಬೆಂಗಳೂರು ತಂಡದೆದುರು70-73 ಪಾಯಿಂಟ್‌ಗಳಿಂದ ಪರಾಭವಗೊಂಡಿತು.
ಇದಕ್ಕೂ ಮೊದಲು ಪ್ರಥಮ ಸುತ್ತಿನಲ್ಲಿ ಪಟ್ಟಾಭಿರಾಮನಗರ ಬೆಂಗಳೂರು ತಂಡವನ್ನು 80-54 ಪಾಯಿಂಟ್‌ಗಳಿಂದ, ಎರಡನೇ ಸುತ್ತಿನ ಪಂದ್ಯ ದಲ್ಲಿ ಕೋರಮಂಗಲ ಬೆಂಗಳೂರು ತಂಡವನ್ನು 58-19 ಪಾಯಿಂಟ್‌ಗಳಿಂದ, ತೃತೀಯ ಸುತ್ತಿನ ಪಂದ್ಯದಲ್ಲಿ ಬ್ರದರ್ಸ್ ಬಿಜಾಪುರ ತಂಡವನ್ನು 71-30 ಪಾಯಿಂಟ್‌ಗಳಿಂದ, ಕ್ವಾರ್ಟರ್ ಫೈನಲ್‌ನಲ್ಲಿ ವಿಮನ್‌ಪುರ ಬೆಂಗಳೂರು ತಂಡವನ್ನು 73-38 ಪಾಯಿಂಟ್‌ಗಳಿಂದ ಪರಾಭವಗೊಳಿಸಿ ಸೆಮಿ ಫೈನಲ್ ಲೀಗ್ ಪ್ರವೇಶಿಸಿತ್ತು.





