ಪೆಟ್ರೋಲ್‌ಗೆ ಮಿಶ್ರಣ ಮಾಡುವ ಎಥೆನಾಲ್ ದರ ಲೀಟರ್‌ಗೆ 1.47 ರೂ. ಏರಿಕೆ

ಹೊಸದಿಲ್ಲಿ,ನ.9: ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಲು ಬಳಸಲಾಗುವ ಎಥೆೆನಾಲ್‌ನ ರದಲ್ಲಿ 2021-22ನೇ ಸಾಲಿನಲ್ಲಿ ಪ್ರತಿ ಲೀಟರ್‌ಗೆ 1.47 ರೂ. ಏರಿಕೆ ಮಾಡಿದೆ.
ಕಬ್ಬಿ ರಸದಿಂದ ಪಡೆಯಲಾಗುವ ಎಥೆನಾಲ್ ಅನ್ನು ಅಧಿಕ ಪ್ರಮಾಣದಲ್ಲಿ ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡುವುದರಿಂದ ತೈಲದ ಆಮದು ವೆಚ್ಚ ಕಡಿತಗೊಳ್ಳಲಿದೆ. ಅಲ್ಲದೆ ಇದರಿಂದಾಗಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಲಾಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರ (ಸಿಸಿಇಎ) ಕುರಿತ ಸಂಪುಟ ಸಮಿತಿಯು ಕಬ್ಬಿನ ರಸದಿಂದ ಪಡೆಯಲಾಗುವ ಎಥೆನಾಲ್‌ನ ದರವನ್ನು ಪ್ರತಿ ಲೀಟರ್‌ಗೆ 63.45 ರೂ.ಗೆ ಹೆಚ್ಚಿಸಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಸಕ್ತ ಎಥೆನಾಲ್ ದರ ಪ್ರತಿ ಲೀಟರ್‌ಗೆ 62.65 ರೂ. ಆಗಿದೆ.ನೂತನ ದರವು 2021ರ ಡಿಸೆಂಬರ್‌ನಿಂದ ಪೂರೈಕೆಯಾಗಲಿರುವ ಎಥೆನಾಲ್‌ಗೆ ಅನ್ವಯವಾಗಲಿದೆ.
ತೈಲ ಮಾರಾಟ ಕಂಪೆನಿಗಳು ಎಥೆನಾಲ್ ಅನ್ನು ಕೇಂದ್ರ ಸರಕಾರ ನಿಗದಿಪಡಿಸಿದ ದರದಲ್ಲಿ ಖರೀದಿಸಬೇಕಾಗುತ್ತದೆ. 2020-21ನೇ ಸಾಲಿನಲ್ಲಿ ಪೆಟ್ರೋಲ್‌ನ ಜೊತೆ ಎಥೆನಾಲ್‌ನ ಮಿಶ್ರಣವು ಶೇ.8ಕ್ಕೆ ತಲುಪಿದೆ ಮತ್ತು ಮುಂದಿನ ವಿತ್ತ ವರ್ಷದಲ್ಲಿ ಅದು ಶೇ.10ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು. 2025ರೊಳಗೆ ಪೆಟ್ರೋಲ್ ಜೊತೆ ಎಥೆನಾಲ್‌ನ ಮಿಶ್ರಣವನ್ನು ಶೇ.20ಕ್ಕೆ ಹೆಚ್ಚಿಸುವ ಯೋಜನೆಯನ್ನು ಭಾರತ ಹೊಂದಿದೆ.