ಸೇನಾ ಮದ್ದುಗುಂಡುಗಳ ಡಿಪೋ ಬಳಿಯಿರುವ ಬಂಗಲೆ ಕೆಡವಲು ಬಿಜೆಪಿ ನಾಯಕನಿಗೆ ಪ್ರಾಧಿಕಾರ ಸೂಚನೆ

ಹೊಸದಿಲ್ಲಿ: ನಗ್ರೋಟಾ ಪ್ರದೇಶದ ಸೇನಾ ಮದ್ದುಗುಂಡುಗಳ ಡಿಪೋ ಬಳಿಯಿರುವ ತಮ್ಮ ಬಂಗಲೆಯನ್ನು ಐದು ದಿನಗಳಲ್ಲಿ ಕೆಡವಲು ಜಮ್ಮು ಅಭಿವೃದ್ಧಿ ಪ್ರಾಧಿಕಾರವು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ನಿರ್ಮಲ್ ಸಿಂಗ್ ಹಾಗೂ ಅವರ ಪತ್ನಿ ಮಮತಾ ಸಿಂಗ್ ಅವರಿಗೆ ಸೂಚಿಸಿದೆ ಎಂದು ಪಿಟಿಐ ಬುಧವಾರ ವರದಿ ಮಾಡಿದೆ.
ನವೆಂಬರ್ 8 ರಂದು ತನ್ನ ಆದೇಶದಲ್ಲಿ, ಜಮ್ಮು ಅಭಿವೃದ್ಧಿ ಪ್ರಾಧಿಕಾರವು ಅಧಿಕಾರಿಗಳಿಂದ ಸೂಕ್ತ ಅನುಮತಿಯನ್ನು ಪಡೆಯದೆ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ.
"ನಿಗದಿತ ಅವಧಿಯೊಳಗೆ ನೀವು ಅಕ್ರಮ ಕಟ್ಟಡವನ್ನು ತೆಗೆದುಹಾಕಲು ವಿಫಲರಾದರೆ, ಅದನ್ನು ಜೆಡಿಎ ಯ ಜಾರಿ ವಿಭಾಗವು ನೆಲಸಮಗೊಳಿಸುತ್ತದೆ ಹಾಗೂ ಕಟ್ಟಡ ತೆರವು ವೆಚ್ಚವನ್ನು ನಿಮ್ಮಿಂದ ಭೂಕಂದಾಯದ ಬಾಕಿಯಾಗಿ ವಸೂಲಿ ಮಾಡಲಾಗುತ್ತದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ, ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಮ್ಮ ಕುಟುಂಬದೊಂದಿಗೆ ಅರಮನೆಯ ಬಂಗಲೆಗೆ ಸ್ಥಳಾಂತರಗೊಂಡಿದ್ದರು.
Next Story