ನ.14ರಂದು ಕುಂದಾಪುರದಲ್ಲಿ ಗಿರಿಜಾ ಹೆಲ್ತ್ಕೇರ್- ಸರ್ಜಿಕಲ್ಸ್ ಶುಭಾರಂಭ
ಕುಂದಾಪುರ, ನ.11: ಉಡುಪಿಯ ಗಿರಿಜಾ ಗ್ರೂಪ್ಸ್ ಆಫ್ ಕನ್ಸರ್ನ್ ವತಿ ಯಿಂದ ಗಿರಿಜಾ ಹೆಲ್ತ್ಕೇರ್ ಹಾಗೂ ಸರ್ಜಿಕಲ್ಸ್ ಮೂರನೇ ಶೋರೂಮ್ ಮತ್ತು ಮೆಡಿಕೇರ್ ಪೊಲಿಕ್ಲಿನಿಕ್ ಇದರ ಉದ್ಘಾಟನೆ ನ.14ರಂದು ಸಂಜೆ 5ಗಂಟೆಗೆ ಕುಂದಾಪುರ ಮುಖ್ಯರಸ್ತೆಯ ಪಾರಿಜಾತ ಹೊಟೇಲಿನ ಎದುರು ಅಥರ್ವ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.
ಈ ಪ್ರಯುಕ್ತ ಮಕ್ಕಳ ದಿನಾಚರಣೆ ಅಂಗವಾಗಿ ಚಿತ್ರಕಲೆ ಮತ್ತು ಮೆಹಂದಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಾಸ್ಯ ಭಾಷಣ ಮಾಂತ್ರಿಕ ಮನು ಹಂದಾಡಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ.
ಚಿತ್ರಕಲೆ ಕಿರಿಯ ವಿಭಾಗದಲ್ಲಿ ಒಂದರಿಂದ 4ನೆ ತರಗತಿ(ನಿಮ್ಮ ಆಯ್ಕೆಯ ತರಕಾರಿ), ಚಿತ್ರಕಲೆ ಹಿರಿಯ ವಿಭಾಗದಲ್ಲಿ 5ರಿಂದ 7ನೇ ತರಗತಿ(ಕರ್ನಾಟಕದ ಬಾವುಟ), ಪ್ರೌಢಶಾಲೆ ವಿಭಾಗದಲ್ಲಿ 8ರಿಂದ 10ನೇ ತರಗತಿ(ನಮ್ಮೂರ ಹಬ್ಬ) ಯ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಜೇತರಿಗೆ ಪ್ರಥಮ ಮತ್ತು ದ್ವೀತಿಯ ಬಹುಮಾನ ನೀಡಲಾಗುವುದು.
ಮೆಹಂದಿ ಸ್ಪರ್ಧೆಗೆ ವಯೋಮಿತಿ ಇರುವುದಿಲ್ಲ. ಪ್ರಥಮ ಮತ್ತು ದ್ವೀತಿಯ ಬಹುಮಾನ ನೀಡಲಾಗುವುದು. ಚಿತ್ರಕಲೆಗೆ ಡ್ರಾಯಿಂಗ್ ಹಾಳೆ ಮತ್ತು ಮೆಹೆಂದಿ ಟ್ಯೂಬ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ರಾಜೇಶ್ ಎಸ್.ಪಿ. 9632580596 ಹಾಗೂ ಗಣೇಶ್ ಮೊಳಹಳ್ಳಿ- 9481842531ನ್ನು ಸಂಪರ್ಕಿ ಬಹುದು ಎಂದು ಪ್ರಕಟಣೆ ತಿಳಿಸಿದೆ.