ಬಿ.ಎಂ.ಜಾಫರ್ ತೋನ್ಸೆಗೆ ಮುಸ್ಲಿಂ ಜಮಾಅತ್ನಿಂದ ಸನ್ಮಾನ
![ಬಿ.ಎಂ.ಜಾಫರ್ ತೋನ್ಸೆಗೆ ಮುಸ್ಲಿಂ ಜಮಾಅತ್ನಿಂದ ಸನ್ಮಾನ ಬಿ.ಎಂ.ಜಾಫರ್ ತೋನ್ಸೆಗೆ ಮುಸ್ಲಿಂ ಜಮಾಅತ್ನಿಂದ ಸನ್ಮಾನ](https://www.varthabharati.in/sites/default/files/images/articles/2021/11/12/313517-1636722070.jpg)
ಉಡುಪಿ: ಹೊಸದಿಲ್ಲಿ ಇಂಡಿಯನ್ ಅಚೀವರ್ಸ್ ಫಾರಂ ವತಿಯಿಂದ ನೀಡಲಾದ ಇಂಡಿಯನ್ ಅಚೀವರ್ಸ್ ಅವಾರ್ಡ್ ಪುರಸ್ಕೃತ ಉದ್ಯಮಿ, ಸಮಾಜ ಸೇವಕ, ತೋನ್ಸೆ ಹೆಲ್ತ್ ಸೆಂಟರ್ ಅಧ್ಯಕ್ಷ ಬಿ.ಎಂ.ಜಾಫರ್ ತೋನ್ಸೆ ಅವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ತೋನ್ಸೆ ಹೆಲ್ತ್ ಸೆಂಟರ್ನಲ್ಲಿ ಸನ್ಮಾನಿಸಲಾಯಿತು.
ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಸುಬ್ಹಾನ್ ಅಹ್ಮದ್ ಹೊನ್ನಾಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಎಂ.ಮನ್ಸೂರ್, ಅಶ್ರಫ್ ದಾರುಸ್ಸಲಾಂ, ನಾಯಕರಾದ ಝಂಝಂ ಹೂಡೆ, ಝುಲ್ಫಿಕರ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.
Next Story