ಕಂಗನಾ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ: ಟೈಮ್ಸ್ ನೌ

ಕಂಗನಾ ರಣಾವತ್ (File Photo: PTI)
ಹೊಸದಿಲ್ಲಿ: ನವೆಂಬರ್ 12ರಂದು ಟೈಮ್ಸ್ ನೌ ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದೆ.ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಮತ್ತು 1947 ರಲ್ಲಿ ಸಿಕ್ಕಿದ್ದು "ಭಿಕ್ಷೆ" ಎಂದು ಕಂಗನಾ ಹೇಳಿಕೊಂಡಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದವು ಮತ್ತು ಆಕೆಯ ವಿರುದ್ಧ ದೂರು ದಾಖಲಿಸುವಂತೆ ಆಪ್ ಪಕ್ಷ ಮುಂಬೈ ಪೊಲೀಸರಿಗೆ ಪತ್ರ ಬರೆದಿತ್ತು.
ಟೈಮ್ಸ್ ನೌ, ತನ್ನ ಟ್ವಿಟರ್ ಖಾತೆಯಲ್ಲಿ ಹೀಗೆ ಹೇಳಿದೆ: “2014 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು #ಕಂಗನಾ ರಣಾವತ್ ಭಾವಿಸಬಹುದು. ಆದರೆ ಇದನ್ನು ಯಾವುದೇ ನಿಜವಾದ ಭಾರತೀಯರು ಅನುಮೋದಿಸಲು ಸಾಧ್ಯವಿಲ್ಲ. ಈಗಿನ ತಲೆಮಾರುಗಳು ಪ್ರಜಾಪ್ರಭುತ್ವದ ಮುಕ್ತ ಪ್ರಜೆಗಳಾಗಿ ಸ್ವಾಭಿಮಾನ ಮತ್ತು ಘನತೆಯ ಜೀವನವನ್ನು ನಡೆಸಲು ತಮ್ಮ ಪ್ರಾಣವನ್ನು ತ್ಯಜಿಸಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಇದು ಅವಮಾನವಾಗಿದೆ" ಎಂದು ಟೈಮ್ಸ್ ನೌ ಟ್ವೀಟ್ ಮಾಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 24 ಸೆಕೆಂಡುಗಳ ಕ್ಲಿಪ್ನಲ್ಲಿ, 1947ರಲ್ಲಿ ಭಾರತದ ಸ್ವಾತಂತ್ರ್ಯವು ನೈಜ ಸ್ವಾತಂತ್ರ್ಯವಲ್ಲ, ಆದು "ಭಿಕ್" (ಭಿಕ್ಷೆ) ಎಂದು ರಣಾವತ್ ಹೇಳಿದ್ದರು. "ಮತ್ತು ನಮಗೆ 2014 ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿತು" ಎಂದು ಅವರು ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ರಣಾವತ್, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಉಲ್ಲೇಖಿಸುತ್ತಿದ್ದರು.
#KanganaRanaut may think India got Independence in 2014 but this cannot be endorsed by any true Indian. This is an insult to millions of freedom fighters who gave up their lives so that present generations can live a life of self-respect & dignity as free citizens of a democracy. pic.twitter.com/o0EtH0hukU
— TIMES NOW (@TimesNow) November 12, 2021







