ಕಪ್ಪು ಹಣ ಬಿಳುಪು ಪ್ರಕರಣ: ಅನಿಲ್ ದೇಶಮುಖ್ ಇ.ಡಿ.ಕಸ್ಟಡಿ ನ.15ರವರೆಗೆ ವಿಸ್ತರಣೆ

ಮುಂಬೈ, ನ.12: ಬಹುಕೋಟಿ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಜಾರಿ ನಿರ್ದೇಶನಾಲಯ (ಇ.ಡಿ.)ದ ಕಸ್ಟಡಿಯ ಅವಧಿಯನ್ನು ಸ್ಥಳೀಯ ನ್ಯಾಯಾಲಯ ನ.15ರವರೆಗೆ ವಿಸ್ತರಿಸಿದೆ.
ಕಳೆದ ವಾರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನವೆಂಬರ್ 6ರಂದು ಮುಂಬೈನ ರಜಾದಿನದ ವಿಶೇಷ ನ್ಯಾಯಾಲಯವು 71 ವರ್ಷ ವಯಸ್ಸಿನ ಎನ್ಸಿಪಿ ನಾಯಕರಾದ ಅನಿಲ್ ದೇಶಮುಖ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದಾಗ್ಯೂ ಮರುದಿನವೇ ಬಾಂಬೆ ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಬದಿಗೊತ್ತಿ, ದೇಶಮುಖ್ ಅವರನ್ನು ನವೆಂಬರ್ 12ರವರೆಗೆ ಇ.ಡಿ. ಕಸ್ಟಡಿಗೆ ಒಪ್ಪಿಸಿತ್ತು.
ಶುಕ್ರವಾರದಂದು ಮಾಜಿ ಸಚಿವ ದೇಶಮುಖ್ ಅವರನ್ನು ವಿಶೇಷ ಕಪ್ಪುಹಣ ಬಿಳುಪು ತಡೆ ಕಾಯ್ದೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಆಲಿಕೆ ನಡೆಸಿದ ನ್ಯಾಯಾಧೀಶ ಎಚ್.ಎಸ್.ಸತ್ಭಾಯ್ ಅವರು ದೇಶಮುಖ್ ಅವರ ಕಸ್ಟಡಿಯನ್ನು ನವೆಂಬರ್ 15ರವರೆಗೆ ವಿಸ್ತರಿಸಿದ್ದಾರೆ.
Next Story