ವಿಟ್ಲ: ಹೊರೈಝನ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ವಿಟ್ಲ, ನ.13: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆಯನ್ನು ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.
ಶಾಲಾ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ. ,ಸಂಚಾಲಕ ನೋಟರಿ ಅಬೂಬಕರ್, ಮೇಲ್ವಿಚಾರಕ ವಿ.ಕೆ.ಎಂ.ಅಶ್ರಫ್, ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಮುಖ್ಯ ಶಿಕ್ಣಕ ಮಹಮ್ಮದ್ ಮುನಾಝೀರ್ ಮುಡಿಪು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಾದ ಫಾತಿಮಾ ತಬ್ಸೀರ ಕಾರ್ಯಕ್ರಮ ನಿರೂಪಿಸಿದರು.
ಖದೀಜಾ ಸನಾ ಸ್ವಾಗತಿಸಿದರು. ಹವ್ವಾ ಹನಾನ್ ವಂದಿಸಿದರು. ಶಿಕ್ಷಕ ವೃಂದದವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
Next Story





