ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಮಂಗಳೂರು, ನ.13: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೈದಾರಾಬಾದ್ ಮೃಗಾಲಯದಿಂದ ಹೊಸ ಅತಿಥಿಗಳ ಆಗಮನವಾಗಿದೆ. ನಾಲ್ಕು ಬರಿಂಕ (ವೌಸ್ ಡಿಯರ್), ಆರು ದೊಡ್ಡ ಬೆಳ್ಳಕ್ಕಿ (ಲಾರ್ಜ್ ಇಗ್ರೆಟ್)ಮತ್ತು ಎರಡು ನೀರು ಹಕ್ಕಿ (ಗ್ರೆ ಪೆಲಿಕನ್) ಆಗಮಿಸಿವೆ.
ಪಿಲಿಕುಳ ಮೃಗಾಲಯದಿಂದ ನಾಲ್ಕು ಕಾಡು ನಾಯಿ (ಢೋಲ್), ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು (ರೆಟಿಕ್ಯುಲೇಟೆಡ್ ಪೈಥಾನ್) ಮತ್ತು ನಾಲ್ಕು ವಿಟೇಕರ್ಸ್ ಹಾವು (ವಿಟೇಕರ್ಸ್ ಬೋ) ನೀಡಲಾಗಿದೆ. ಹೊಸತಾಗಿ ಆಗಮಿಸಿರುವ ಪ್ರಾಣಿ ಪಕ್ಷಿಗಳು ವೀಕ್ಷಣೆಗೆ ಲಭ್ಯವಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
Next Story







