ಹನೂರು: ಒಂಟಿ ಸಲಗದಿಂದ ಬೆಳೆ ಹಾನಿ ; ರೈತರು ಕಂಗಾಲು

ಹನೂರು: ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಕೊಂಬ್ಯೆ ನಗರದ ವಿವಿಧ ಜಮೀನುಗಳಿಗೆ ತಡ ರಾತ್ರಿ ದಾಳಿ ನಡೆಸಿದ ಒಂಟಿ ಆನೆ ಬೆಳೆದಿದ್ದ ಅಪಾರ ಮೆಕ್ಕೆಜೋಳ ಫಸಲು ಹಾಗೂ ತೊಗರಿ ಫಸಲನ್ನು ತುಳಿದು ಹಾಳು ಮಾಡಿದೆ.
ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿ ಪ್ರದೇಶದ ಮಾರ್ಟಳ್ಳಿಯ ಕೊಂಬ್ಯೆನಗರದ ಅಂಥೋನಿಸ್ವಾಮಿ ಸಂಥ್ಯಾಗೋ ಮೊದಲೇಮುತ್ತು ಎಂಬಬುವವರಿಗೆ ಸೇರಿರುವ ಜಮೀನಿಗಳಿಗೆ ರಾತ್ರೋರಾತ್ರಿ ನುಗ್ಗಿದ ಒಂಟಿಯಾನೆ, ಅಪಾರ ಪ್ರಮಾಣದ ಫಸಲನ್ನು ಹಾಗೂ ವಿವಿಧ ಪರಿಕರಗಳನ್ನು ನಾಶಪಡಿಸಿದೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಇತ್ತೀಚಿಗೆ ಚಿರತೆ ದಾಳಿಗೆ ಜಾನುವಾರುಗಳನ್ನು ಕಳೆದುಕೂಂಡು ನಲುಗಿದ್ದ ಈ ಭಾಗದ , ರೈತಾಪಿ ವರ್ಗ ಬಾರಿ ಸಂಕಷ್ಟಕ್ಕೆ ಸಿಲುಕಿದೆ. ಫಸಲು ನಾಶಕ್ಕೆ ಒಳಗಾಗಿರುವ ರೈತರು ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಇತ್ತೀಚಿಗೆ ರೈತರ ಜಮೀನಿಗೆ ಲಗ್ಗೆ ಇಡುತ್ತಿರುವ ಕಾಡು ಪ್ರಾಣಿಗಳು ಬೆಳೆಗಳನ್ನು ನಾಶಪಡಿಸಿ, ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಇದರಿಂದ ರೈತರು ಜೀವನ ನಡೆಸಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿಗೆ ಅಂಕುಶಹಾಕಬೇಕು ಎಂದು ಮನವಿ ಮಾಡಿದ್ದಾರೆ.







