ಅಮ್ಮ ಗೌರವ ಪುರಸ್ಕಾರಕ್ಕೆ ನಾಲ್ವರು ಆಯ್ಕೆ
ಬೆಂಗಳೂರು, ನ.13: ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನವು 2021ನೇ ಸಾಲಿನ ರಾಜ್ಯಮಟ್ಟದ ಅಮ್ಮ ಗೌರವ ಪುರಸ್ಕಾರಕ್ಕೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.
ಈ ಬಾರಿಯ `ಅಮ್ಮ ಗೌರವ' ಪುರಸ್ಕಾರಕ್ಕೆ, ರಂಗಭೂಮಿ ಕ್ಷೇತ್ರದಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಮತ್ತು ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ನಿರ್ಮಲಾ ಪಾಟೀಲ ಬೊಮ್ನಳ್ಳಿ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಜಯಶ್ರೀ ಐನಾಪುರ, ಅವರನ್ನು ಆಯ್ಕೆ ಮಾಡಲಾಗಿದೆ. ನ.26ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಆರಂಭಗೊಂಡ `ಅಮ್ಮ ಗೌರವ ಪುರಸ್ಕಾರ'ಕ್ಕೆ ಪ್ರತಿವರ್ಷ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ‘ಅಮ್ಮ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಗುತ್ತದೆ.
Next Story





