ಬೆಂಗಳೂರಿನಲ್ಲಿ 170 ನಕ್ಷತ್ರ ಆಮೆಗಳ ರಕ್ಷಣೆ

ಬೆಂಗಳೂರು, ನ.13: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಸಿಟಿ ಮಾರ್ಕೆಟ್ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್‍ನಲ್ಲಿರಿಸಿದ್ದ 170 ನಕ್ಷತ್ರ ಆಮೆಗಳ ಕಳ್ಳಸಾಗಣೆ ಪ್ರಕರಣ ಪತ್ತೆಯಾಗಿತ್ತು.
ಸದ್ಯ ಆಮೆಗಳನ್ನು ರಕ್ಷಣೆ ಮಾಡಲಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಮೆಗಳ ರವಾನೆ ಮಾಡಲಾಗಿದೆ. ಅಲ್ಲದೆ, ಮೈಸೂರು, ಬೆಂಗಳೂರಿನಲ್ಲಿ ಇದೇ ನಕ್ಷತ್ರ ಆಮೆಗೆ 25ರಿಂದ 35 ಲಕ್ಷ ರೂ.ವರೆಗೆ ಮಾರುಕಟ್ಟೆ ಬೆಲೆ ಇದೆ. ಶ್ರೀಮಂತ ವರ್ಗದವರು ದುಬಾರಿ ಬೆಲೆಗೆ ಈ ಆಮೆಯನ್ನು ಖರೀದಿಸುತ್ತಾರೆ ಎಂಬುದು ತಿಳಿದು ಬಂದಿದೆ.
Next Story





