ಬೆಂಗಳೂರು: ನಾಳೆ ಕೃಷಿಮೇಳಕ್ಕೆ ತೆರೆ

ಬೆಂಗಳೂರು, ನ.13: ನಗರದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ನಾಲ್ಕುದಿನದ ಕೃಷಿಮೇಳವು ಇಂದು(ನ.14) ಕೊನೆಯ ದಿನವಾಗಿದೆ. ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ್ದ ಕೃಷಿಮೇಳದಲ್ಲಿ ಕೃಷಿಯ ಹೊಸ ತಂತ್ರಜ್ಞಾನ ಮತ್ತು ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಲಾಯಿತು. ಮೇಳದಲ್ಲಿ ಸಾವಿರಾರು ರೈತರು ಭಾಗವಹಿಸಿ, ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಶನಿವಾರ ರೇಷ್ಮೆಕೃಷಿ ಕುರಿತ ಎಲ್ಲಾ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರೇಷ್ಮೆಕೃಷಿ ಆಧುನಿಕ ಬೇಸಾಯ ಪದ್ಧತಿ ಎಂಬ ಕೃತಿಯನ್ನು ಹೊರ ತಂದಿದೆ. ಒಂದು ತಿಂಗಳ ನಂತರ ಪಿಡಿಎಫ್ ರೂಪದ ಈ ಪುಸ್ತಕವನ್ನು ಉಚಿತವಾಗಿ ಮೊಬೈಲ್‍ನಲ್ಲಿ ಪಡೆಯಬಹುದಾಗಿದ್ದು, ಆಸಕ್ತಿಯುಳ್ಳ ರೈತರು ವಾಟ್ಸ್‍ಆಪ್ ಸಂಖ್ಯೆ 9535355329 ಅಥವಾ 8553242422ಗೆ ಸಂದೇಶದ ಮೂಲಕ ಮನವಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಮೇಳದ ಮೊದಲ ದಿನವಾದ ಗುರುವಾರದಂದು ಏಳು ಲಕ್ಷ ರೂ.ಗೆ ಬೆಲೆ ಬಾಳುವ ಬೋಯರ್ ತಳಿಯ ಮೇಕೆಗಳು ಎಲ್ಲರ ಗಮನ ಸೆಳೆದಿದ್ದವು. ಕೃಷಿ ಮೇಳದ ಎರಡನೆಯ ದಿನವಾದ ಶುಕ್ರವಾರದಂದು ಮಳೆ ನಡುವೆಯೂ ಒಂದು ಲಕ್ಷ ಜನರು ಕೃಷಿಮೇಳದಲ್ಲಿ ಭಾಗವಹಿಸಿದ್ದು, 5ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ಮತ್ತು ಫೇಸ್‍ಬುಕ್ ಮೂಲಕ ಕೃಷಿಮೇಳವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಕೃಷಿ ಮೇಳದಲ್ಲಿ ಹಾಕಲಾಗಿದ್ದ ಮಳಿಗೆಗಳು ಗಾಳಿ-ಮಳೆಗೆ ನೆಲ ಕಚ್ಚಿದ್ದವು. ಮೇಳದಲ್ಲಿ ಮನಬಿಚ್ಚಿ ಓಡಾಡುವುದು ರೇಜಿಗೆ ಹುಟ್ಟಿಸಿತ್ತು. ಹಾಗಾಗಿ ದೂರ ದೂರ ಪ್ರದೇಶಗಳಿಂದ ಬಂದಿದ್ದ ರೈತರಿಗೆ ಅನಾನೂಕೂಲತೆ ಉಂಟಾಗಿತ್ತು. ರೈತರ ಆದಾಯ ದ್ವಿಗುಣಗೊಳಿಸಲು ಲಭ್ಯವಿರುವ ಹೊಸ ತಾಂತ್ರಿಕತೆ ಬಳಕೆ, ನವ ತಳಿಯ ಭತ್ತ, ರಾಗಿ, ಹಲಸು, ನವಣೆ, ಮೇವಿನ ತೋಕೆ ಗೋಧಿ, ಬರಗು ಪರಿಚಯಿಸಲಾಗುತ್ತಿದೆ. ಮೇಳದಲ್ಲಿ ತಳಿಯ ಬಿಡುಗಡೆ ಜೊತೆಗೆ ಕೃಷಿ ಸಾಧಕರನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದೆ.






.jpg)
.jpg)
.jpg)

