ಟಿಎಂಸಿಯ ಗೋವಾ ಘಟಕದ ಉಸ್ತುವಾರಿಯಾಗಿ ಮಹುವಾ ಮೊಯಿತ್ರಾ ನೇಮಕ

ಕೋಲ್ಕತ್ತಾ: 2022ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರದಂದು ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪಕ್ಷದ ಗೋವಾ ಘಟಕದ ಉಸ್ತುವಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದೆ.
"ನಮ್ಮ ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿ ತಕ್ಷಣದಿಂದ ಜಾರಿಗೆ ಬರುವಂತೆ ಎಐಟಿಸಿ ಗೋವಾ ಘಟಕದ ರಾಜ್ಯ ಉಸ್ತುವಾರಿಯಾಗಿ ಕೃಷ್ಣ ನಗರ ಸಂಸದೆ ಮಹುವಾ ಮೊಯಿತ್ರಾರನ್ನು ನೇಮಿಸಲು ಸಂತೋಷಪಡುತ್ತಿದ್ದಾರೆ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಕ್ಷವು ಪಶ್ಚಿಮ ಬಂಗಾಳದ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆಗಾಗಿ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೋ ಫಲೆರೊ ಅವರನ್ನು ನಾಮನಿರ್ದೇಶನ ಮಾಡಿತು.
Next Story