ಜಗಳೂರು: ಕೆರೆಯಲ್ಲಿ ಮುಳುಗಿ ಇಬ್ಬರು ಸಹೋದರರ ಸಹಿತ ಮೂವರು ಬಾಲಕರು ಮೃತ್ಯು

ದಾವಣಗೆರೆ, ನ.14: ಜಗಳೂರಿನಲ್ಲಿ ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರಲ್ಲಿ ಇಬ್ಬರು ಸಹೋದರರಾಗಿದ್ದಾರೆ.
ಜಗಳೂರು ತಾಲೂಕಿನ ಸಂತೆಮುದ್ದಾಪುರ ಮೂಲದ ಪಟ್ಟಣದ ನಿವಾಸಿ ಶೇಖಾವತ್ ಎಂಬವರ ಪುತ್ರರಾದ ಆಶಿಕ್ (10), ಅಫ್ರಾನ್ (8) ಹಾಗೂ ಅಬ್ದುಲ್ಲಾ ಎಂಬವರ ಪುತ್ರ ಸೈಯದ್ ಫೈಝಾನ್ (9) ಮೃತಪಟ್ಟ ಬಾಲಕರು.
ಮಧ್ಯಾಹ್ನ ಶಾಲೆಯಿಂದ ಮರಳಿದ ಬಾಲಕರು ಬಳಿಕ ಈಜಲೆಂದು ಮನೆಯಿಂದ ತೆರಳಿದ್ದರು. ಸಂಜೆಯಾದರೂ ಬಾಲಕರು ಮನೆಗೆ ಹಿಂದಿರುಗಿ ಬಾರದಿರುವುದರಿಂದ ಪೋಷಕರು ಹುಡುಕಾಡಿದಾಗ ದುರಂತ ಬೆಳಕಿಗೆ ಬಂದಿದೆ.
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬಾಲಕರ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದರು.
ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





