ಕಂಗನಾ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿದ ಹಿರಿಯ ನಟ ವಿಕ್ರಮ್ ಗೋಖಲೆ

photo: Indian express
ಹೊಸದಿಲ್ಲಿ: 1947 ರಲ್ಲಿ ಭಾರತ ಗೆದ್ದುಕೊಂಡಿರುವ ಸ್ವಾತಂತ್ರ್ಯ “ಭಿಕ್ಷೆ” ಆಗಿತ್ತು ಎಂಬ ನಟಿ ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಯನ್ನು ಹಿರಿಯ ನಟ ವಿಕ್ರಮ್ ಗೋಖಲೆ ಬೆಂಬಲಿಸಿದ್ದಾರೆ.
ನಟನ 75 ನೇ ಹುಟ್ಟುಹಬ್ಬದ ಅಂಗವಾಗಿ ಪುಣೆಯಲ್ಲಿ ಬ್ರಾಹ್ಮಣ ಮಹಾಸಂಘ ಆಯೋಜಿಸಿದ್ದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾತನಾಡಿದ ಗೋಖಲೆ, ರಣಾವತ್ ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ ಎಂದು ಹೇಳಿದರು.
''ಕಂಗನಾ ಹೇಳಿಕೆಗೆ ನನ್ನ ಸಹಮತವಿದೆ. ಭಿಕ್ಷೆಯಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸಿದ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು ಹಾಗೂ ಆ ಸಮಯದಲ್ಲಿ ದೊಡ್ಡವರು ಅವರನ್ನು ಉಳಿಸಲು ಪ್ರಯತ್ನಿಸಲಿಲ್ಲ. ನಾನು ಬಹಳಷ್ಟು ಓದಿದ್ದೇನೆ” ಎಂದು ಗೋಖಲೆಯವರು ಪದೇ ಪದೇ ರಣಾವತ್ ಹೇಳಿಕೆಗೆ ತಮ್ಮ ಬೆಂಬಲವನ್ನು ಒತ್ತಿ ಹೇಳಿದರು.
ಗೋಖಲೆ ರಂಗಭೂಮಿಯ ಜೊತೆಗೆ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ಹೆಸರು ಗಳಿಸಿದ್ದಾರೆ.
Next Story