ಗುಜರಿ ಅಂಗಡಿಯ ಸೊತ್ತು ಕಳವು
ಕೋಟ, ನ.14: ಕೋಟ ಹತ್ತಿರದಲ್ಲಿರುವ ಗುಜರಿ ಅಂಗಡಿಯ ಹೊರಗಡೆ ಇಟ್ಟಿದ್ದ ಸಾವಿರಾರು ರೂ. ಮೌಲ್ಯದ ಗುಜರಿ ಸೊತ್ತುಗಳನ್ನು ನ.13ರಂದು ರಾತ್ರಿ ಕಳ್ಳರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕೋಟದ ಆನಂದ ಶೆಟ್ಟಿ ಎಂಬವರ ಗುಜರಿ ಅಂಗಡಿಯ ಹೊರಗಡೆ ಇದ್ದ ಹೊಂಡಾ ಕಂಪನಿಯ ಜನರೇಟರ್, ಬ್ಯಾಟರಿಗಳು, ಇನವೋಟರ್, ಸ್ಟೀಲ್ ಗುಜರಿ ವಸ್ತುಗಳು, ತಾಮ್ರದ ಕಟ್ಟಾರ, ತಾಮ್ರದ ಹಂಡೆ, ಅಲ್ಯೂಮಿನಿಯಂ ಸಾಮನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 59,500ರೂ. ಅಂದಾಜಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





