ಅಲ್ ಜಝೀರಾ ಟಿವಿ ವಾಹಿನಿಯ ಸುಡಾನ್ ಬ್ಯೂರೋಚೀಫ್ ಬಂಧನ
ಕೈರೊ, ನ.14: ಅಲ್ ಜಝೀರಾ ಟಿವಿ ವಾಹಿನಿಯ ಸುಡಾನ್ ಬ್ಯೂರೋ ಚೀಫ್ ಎಲ್ ಮುಸಾಲ್ಮಿ ಕಬಶಿಯ ಮನೆ ಮೇಲೆ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿರುವ ಸುಡಾನ್ ಪಡೆಗಳು ಅವರನ್ನು ಬಂಧಿಸಿವೆ ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಸುಡಾನ್ನ ರಾಜಧಾನಿ ಖರ್ಟೌಮ್ ಹಾಗೂ ಇತರ ನಗರಗಳಲ್ಲಿ ಶನಿವಾರ ಸೇನೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಪ್ರತಿಭಟನೆಯಲ್ಲಿ ಕನಿಷ್ಟ 5 ಮಂದಿ ಗುಂಡೇಟನಿಂದ ಮೃತಪಟ್ಟಿದ್ದಾರೆ ಎಂದು ಪ್ರತಿಭಟನೆಯನ್ನು ಆಯೋಜಿಸಿದ್ದ ಸುಡಾನ್ ವೈದ್ಯರ ಕೇಂದ್ರ ಸಮಿತಿ ಹೇಳಿದೆ.
Next Story





