Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ15 Nov 2021 12:02 AM IST
share
ಓ ಮೆಣಸೇ...

ಭಾರತಕ್ಕೆ ನೈಜ ಸ್ವಾಂತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ- ಕಂಗನಾ ರಣಾವತ್, ನಟಿ
ಹೌದು, ದೇಶದ ಸೊತ್ತುಗಳನ್ನೆಲ್ಲ ಖಾಸಗಿ ಕಂಪೆನಿಗಳಿಗೆ ಮಾರಿ, ಬಡವರಿಂದ ತುತ್ತು ಅನ್ನವನ್ನು ಕಿತ್ತುಕೊಳ್ಳುವ ಸ್ವಾತಂತ್ರ ಹಿಂದೆಂದೂ ಯಾವುದೇ ಸರಕಾರಕ್ಕೆ ಇರಲಿಲ್ಲ.


ಬಡತನ, ಅಸ್ಪಶ್ಯತೆ ಕಾಂಗ್ರೆಸ್‌ನ 60 ವರ್ಷಗಳ ಆಡಳಿತದ ಬಹು ದೊಡ್ಡ ಕೊಡುಗೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಆ ಬಳಿಕ ಬಂದವರು ಅವೆರಡನ್ನೂ ಮತ್ತಷ್ಟು ಬಲಪಡಿಸಿ ಭ್ರಷ್ಟತೆ, ಅರಾಜಕತೆ ಎಂಬಿತ್ಯಾದಿ ಹೊಸ ಕೊಡುಗೆಗಳನ್ನು ನೀಡುತ್ತಿದ್ದಾರೆ.


ಪದವೀಧರರು ತಾವು ಪಡೆದುಕೊಂಡದ್ದನ್ನು ಸಮಾಜಕ್ಕೆ ಮರಳಿ ನೀಡುವ ಸಂದರ್ಭ ಬಂದಿದೆ- ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಅಸಲು ಪದವಿ ಪಡೆದವರು ಬೇರೇನಲ್ಲದಿದ್ದರೆ ತಮ್ಮ ಪದವಿಯನ್ನಾದರೂ ಮರಳಿಸಬಹುದು.


ಪ್ರಧಾನಿ ಮೋದಿ, 2047ಕ್ಕೆ ಭಾರತ ಯಾವ ರೀತಿ ಇರಬೇಕೆಂಬುದಕ್ಕೆ ಯೋಜನೆ ರೂಪಿಸಿದ್ದಾರೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಆಗ 97ರ ಹರೆಯದಲ್ಲಿರುವ ಮೋದಿಯವರು, ವೃದ್ಧಾಶ್ರಮದಿಂದ ದೇಶ ನಡೆಸುವುದಕ್ಕೆ ಯೋಜನೆ ರೂಪಿಸಿರಬೇಕು.


ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದರಿಂದಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲಾಗಿದೆ- ಡಿ.ಕೆ.ಶಿವಕುಮಾರ್, ಕೆಪಿಸಿಸಿಅಧ್ಯಕ್ಷ
ಆದ್ದರಿಂದ ಬಿಜೆಪಿಯನ್ನು ಸೋಲಿಸುವುದರಲ್ಲೇ ತಮ್ಮ ಕ್ಷೇಮ ಅಡಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ - ಅರುಣ್ ಸಿಂಗ್, ಬಿಜೆಪಿ ರಾಜ್ಯಉಸ್ತುವಾರಿ
ಆದ್ದರಿಂದ ಇನ್ನಷ್ಟು ಚೆನ್ನಾಗಿ ಕೆಲಸ ಮಾಡುವವರನ್ನು ತರುವ ನಿರ್ಧಾರವಾಗಿದೆಯೇ?


ರಾಜ್ಯದ ಉಪಚುನಾವಣೆಯ ಫಲಿತಾಂಶದ ಕುರಿತಂತೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಯಾವುದೇ ಚರ್ಚೆಯಾಗಿಲ್ಲ - ಆರ್. ಅಶೋಕ್, ಸಚಿವ
ಫಲಿತಾಂಶ, ಪ್ರಸ್ತಾಪಯೋಗ್ಯವಾಗಿದ್ದರೆ ತಾನೇ ಆ ಕುರಿತು ಚರ್ಚೆಯನ್ನು ಪ್ರಸ್ತಾಪಿಸುವುದು?


ಭಾರತದ ಕ್ರಿಕೆಟಿಗರು ರಾಷ್ಟ್ರೀಯ ತಂಡಕ್ಕಾಗಿ ಆಡುವುದಕ್ಕೆ ಪ್ರಾಶಸ್ತ್ಯ ನೀಡಬೇಕು - ಕಪಿಲ್ ದೇವ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ
ಆಗಲಾದರೂ ಅವರ ಎಳೆಯ ಮಕ್ಕಳು ಅತ್ಯಾಚಾರದ ಬೆದರಿಕೆಗಳಿಂದ ಸುರಕ್ಷಿತರಾಗಿ ಉಳಿಯುವರೇ?



ನ್ಯಾಯಾಲಯ ಬಳ್ಳಾರಿಯಲ್ಲಿ ಉಳಿಯಲು ಅನುಮತಿ ನೀಡಿದೆ. ಆದ್ದರಿಂದ ಇನ್ನು ಮುಂದೆ ಅಲ್ಲೇ ಇದ್ದು ಜನಸೇವೆ ಮಾಡುವೆ- ಜನಾರ್ದನ ರೆಡ್ಡಿ, ಮಾಜಿ ಸಚಿವ
ಬಳ್ಳಾರಿಯಲ್ಲಿ ಎಲ್ಲಿ?


ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡುತ್ತದೆ - ಮುಷ್ತಾಕ್ ಅಹ್ಮದ್, ಪಾಕ್ ಮಾಜಿ ಕ್ರಿಕೆಟಿಗ
ನಿಮ್ಮ ತಂಡ ಗೆದ್ದಿದ್ದರೆ ಇದನ್ನೆಲ್ಲಾ ಚರ್ಚಿಸಬಹುದಿತ್ತು. ಸದ್ಯ ನಿಮ್ಮವರ ಸೋಲಿನ ಕಾರಣಗಳನ್ನು ಚರ್ಚಿಸಿ.


ಧರ್ಮ ಮತ್ತು ರಿಲೀಜನ್ ಎರಡೂ ಒಂದೇ ಅಲ್ಲ-ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಆದರೆ ನಿಮ್ಮಂತವರ ಕೈಯಲ್ಲಿ ಎರಡೂ ಸಮಾನವಾಗಿ ಕುಲಗೆಡುತ್ತದೆ.


ನನಗೆ ಬಿಟ್ ಗೊತ್ತಿಲ್ಲ, ಕಾಯಿನ್ ಕೂಡಾ ಗೊತ್ತಿಲ್ಲ. ನನಗೆ ಗೊತ್ತಿರುವುದು ಒಂದೇ ಪೊಲಿಸ್ ಬೀಟ್ - ವಿ.ಸೋಮಣ್ಣ, ಸಚಿವ
ಇಲಾಖೆಯ ಟರ್ಮಿನಾಲಜಿ ಗೊತ್ತಿಲ್ಲದವರು ಪೊಲೀಸ್ ಬೀಟ್ ಅಂದರೆ ಪೋಲೀಸರ ಪೆಟ್ಟು ಎಂದು ತಿಳ್ಕೊಳ್ತಾರೆ.


ದಲಿತ ಸಿಎಂ ಆದರೆ ನಾನೇ ಮೊದಲು ಖುಷಿ ಪಡುತ್ತೇನೆ, ನಾನೂ ದಲಿತನೇ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಯಾವ ಪುಡಾರಿ ಸಿಎಂ ಆದರೂ ನಾನು ಖುಷಿಪಡುತ್ತೇನೆ ಅಂದು ಬಿಡಿ, ನೀವು ಕೂಡಾ ಪುಡಾರಿಯೇ ತಾನೇ?


ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚತುಷ್ಪಥ ಎಂಬ ಪದ ಯಾರೂ ಕೇಳಿರಲು ಸಾಧ್ಯವಿಲ್ಲ - ಎಸ್.ಅಂಗಾರ, ಸಚಿವ
ಆಗ ಅಂಗಾರ ಎಂಬ ಪದವನ್ನೂ ಹೆಚ್ಚಿನವರು ಕೇಳಿರಲಿಲ್ಲ.


ಉತ್ತರಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಿ ಅಧಿಕಾರದ ಗದ್ದುಗೆ ಏರಲಿದೆ - ಮಾಯಾವತಿ, ಬಿಎಸ್ಪಿ ವರಿಷ್ಠೆ
ಬಿಜೆಪಿಯನ್ನು ಗದ್ದುಗೆಗೇರಿಸುವುದಕ್ಕೆ ಬೇರೆ ಉಪಾಯವೇ ಇಲ್ಲವೇ?


ಕಾಂಗ್ರೆಸ್ ಸತ್ತಿಲ್ಲ ಎಂದು ತೋರಿಸಿಕೊಳ್ಳಲು ಬಿಟ್ ಕಾಯಿನ್ ಬಗ್ಗೆ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದೆ - ಕೆ.ಎಸ್. ಈಶ್ವರಪ್ಪ, ಸಚಿವ
ನಿಮ್ಮಂಥವರನ್ನು ನಾಯಕರಾಗಿಸಿರುವ ಪಕ್ಷ ಸತ್ತಿಲ್ಲ ಎಂದು ಸಾಬೀತುಪಡಿಸುವುದಕ್ಕೆ ನಿಮ್ಮ ಬಳಿ ಯಾವ ಆರೋಪವಿದೆ?


ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ - ಬಿ.ಸಿ.ನಾಗೇಶ್, ಸಚಿವ
ಜನವಿರೋಧಿ ಸರಕಾರವೆಂದ ಮೇಲೆ ಯಾವುದೇ ವಿಷಯದಲ್ಲಿ ಜನವಿರೋಧವನ್ನು ಲೆಕ್ಕಿಸಬೇಕಾಗಿಲ್ಲ.


ಹಂದಿಗಳ ಜೊತೆ ಗುದ್ದಾಡಬಾರದು ಎಂಬುದನ್ನು ನಾನು ಕಲಿತಿದ್ದೇನೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮಾಜಿ ಸಿಎಂ
ಇನ್ನಾದರೂ ಹಂದಿಗಳು ನೆಮ್ಮದಿಯಾಗಿ, ನಿರ್ಮಲವಾಗಿರಬಹುದು.


ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಪ ನಳಿನ್‌ಕುಮಾರ್ ಕಟೀಲು ಅವರ ಬದಲಾವಣೆ ಸಾಧ್ಯವೇ ಇಲ್ಲ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಬಿಜೆಪಿಯಲ್ಲಿ ಯಾವಾಗಲೂ ಹೀಗೆಯೇ. ಬದಲಾವಣೆ ಇಲ್ಲ ಎಂಬ ಹೇಳಿಕೆಗಳು ಬೆನ್ನು ಬೆನ್ನಿಗೆ ಬರಲಾರಂಭಿಸಿದರೆ ಬದಲಾವಣೆ ಖಚಿತ ಎಂದರ್ಥ.


ರಾಜ್ಯದ ಜನರು ನನ್ನನ್ನು ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಕರೆಯಬೇಕೆಂಬುದು ನನ್ನ ಆಸೆ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಆದರೆ ನಿಮ್ಮ ಪಕ್ಷದ ವರಿಷ್ಠರು, ಜನರು ನಿಮ್ಮನ್ನು ಕೇವಲ ಜನಸಾಮಾನ್ಯನೆಂದು ಕರೆದರೆ ಸಾಕೆಂದು ತೀರ್ಮಾನಿಸಿದ್ದಾರೆ ಎಂಬ ವದಂತಿಗಳಿವೆಯಲ್ಲಾ?


ಕಾಂಗ್ರೆಸ್ ನಾಯಕರ ಚೀಲದಲ್ಲಿ ಹಾವಿದ್ದರೆ ಧೈರ್ಯದಿಂದ ಹೊರಗೆ ಬಿಡಲಿ, ಆಗ ಅದು ಯಾರನ್ನು ಕಚ್ಚುತ್ತದೆ ನೋಡೋಣ- ಆರಗ ಜ್ಞಾನೇಂದ್ರ, ಸಚಿವ
ಪುಡಾರಿಗಳ ಒಳಗಿನ ವಿಷಕ್ಕೆ ವಿಷದ ಹಾವುಗಳು ಕೂಡಾ ಅಂಜುತ್ತವೆ ಎಂಬಷ್ಟು ಉರಗಜ್ಞಾನವೂ ನಿಮಗಿಲ್ಲವೇ?


ಯಾರೆಲ್ಲ ಪಕ್ಷ ಬಿಡಲಿದ್ದಾರೆ ಎಂಬ ಮಾಹಿತಿ ಎರಡು ವರ್ಷಗಳ ಹಿಂದಿನಿಂದಲೇ ನನ್ನ ಬಳಿ ಇದೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬಿಜೆಪಿ ಜೊತೆ ಡೀಲ್ ಮಾಡಿದರೆ ಆಗುವ ಲಾಭಗಳನ್ನೂ ನೀವು ಅಷ್ಟೇ ಸ್ಪಷ್ಟವಾಗಿ ಲೆಕ್ಕ ಹಾಕಿರಬೇಕಲ್ಲ?


ಭಾರತದ ಒಂದಿಂಚೂ ಜಾಗ ಚೀನಾಕ್ಕೆ ಬಿಟ್ಟುಕೊಡುವುದಿಲ್ಲ- ಜ.ಬಿಪಿನ್ ರಾವತ್, ಸೇನಾಮುಖ್ಯಸ್ಥ
ಇಂಚು ಮತ್ತು ಫೀಟುಗಳಲ್ಲಿ ಅವರಿಗೂ ಆಸಕ್ತಿ ಇಲ್ಲ. 

share
ಪಿ.ಎ.ರೈ
ಪಿ.ಎ.ರೈ
Next Story
X