ದಿಲ್ಲಿ: ಜೆಎನ್‌ಯುನಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ; ಎರಡೂ ಕಡೆಗಳಿಂದ ಪ್ರಕರಣ ದಾಖಲು

ಹೊಸದಿಲ್ಲಿ: ದಿಲ್ಲಿಯ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ರವಿವಾರ ಘರ್ಷಣೆ ನಡೆದಿದೆ. ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಇತ್ತಂಡಗಳೂ ಪ್ರಕರಣ ದಾಖಲಿಸಿವೆ ಎಂದು indianexpress.com ವರದಿ ಮಾಡಿದೆ. ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಎಬಿವಿಪಿ ವಿದ್ಯಾರ್ಥಿಗಳು ಸಭೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಗೆ ಸಂಘಟನೆಯು ಆಂಬುಲೆನ್ಸ್ ನಲ್ಲಿದ್ದ ವಿದ್ಯಾರ್ಥಿಯ ವೀಡಿಯೋವನ್ನು ಪೋಸ್ಟ್ ಮಾಡಿದೆ. ಹಲ್ಲೆಯ ಪರಿಣಾಮ ಸ್ನಾತಕೋತ್ತರ ವಿದ್ಯಾರ್ಥಿಯ ಬೆರಳು ಮುರಿದಿದೆ. ಓರ್ವ ದಿವ್ಯಾಂಗ ವಿದ್ಯಾರ್ಥಿಯ ಮೇಲೂ ಹಲ್ಲೆ ನಡೆಸಲಾಗಿದೆ. ಹಲವು ಎಬಿವಿಪಿ ಕಾರ್ಯಕರ್ತರಿಗೆ ಹಲ್ಲೆಗೈಯಲಾಗಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದೆ.
ಏತನ್ಮಧ್ಯೆ, ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ (ಜೆಎನ್‌ಯುಎಸ್‌ಯು) ವಿದ್ಯಾರ್ಥಿಗಳು, ಎಬಿವಿಪಿಯ ವಿದ್ಯಾರ್ಥಿಗಳು ತಮ್ಮ ಸಭೆಗೆ ಅಡ್ಡಿಪಡಿಸಿದರು ಮತ್ತು ಕ್ಯಾಂಪಸ್‌ನೊಳಗೆ "ಹಿಂಸಾಚಾರ ಮಾಡಲೆತ್ನಿಸಿದರು ಎಂದು ಆರೋಪಿಸಿದರು. ಗಾಯಗೊಂಡ ಮೂರ್ನಾಲ್ಕು ವಿದ್ಯಾರ್ಥಿಗಳ ಫೋಟೋಗಳನ್ನು ಜೆಎನ್‌ಯುಎಸ್‌ಯು ಅಧ್ಯಕ್ಷೆ ಮತ್ತು ಎಸ್‌ಎಫ್‌ಐ ಸದಸ್ಯೆ ಐಶೆ ಘೋಷ್ ಪೋಸ್ಟ್ ಮಾಡಿದ್ದಾರೆ.
ಗೌರವ್ ಶರ್ಮಾ, ಡಿಸಿಪಿ (ನೈಋತ್ಯ) ಪ್ರಕಾರ “ಪಿಸಿಆರ್ ಕರೆ ಬಂದ ತಕ್ಷಣ ನಾವು ತಕ್ಷಣ ಪ್ರತಿಕ್ರಿಯಿಸಿದ್ದೇವೆ ಮತ್ತು ಕ್ಯಾಂಪಸ್‌ನಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ ಎಂದು ಕಂಡುಕೊಂಡಿದ್ದೇವೆ. ವಿದ್ಯಾರ್ಥಿ ಸಂಘದ ಸಭಾಂಗಣದಲ್ಲಿ ವಿಚಾರ ಸಂಕಿರಣ ಆಯೋಜಿಸುವ ಕುರಿತು ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಜೆಎನ್‌ಯುಎಸ್‌ಯು ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಿಲ್ಲ ಆದರೆ ಒಬ್ಬ ವಿದ್ಯಾರ್ಥಿ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳೂ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.