ಕಾರ್ಕಳ : ಸಿಡಿಲು ಬಡಿದು ವ್ಯಕ್ತಿ ಮೃತ್ಯು

ಕಾರ್ಕಳ : ಕಾರ್ಕಳ ತಾಲೂಕು ಬೈಲೂರು ಗ್ರಾಮದ ನೀರೆ ಎಂಬಲ್ಲಿ ಮನೆಗೆ ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಂದು ಸಂಜೆಯ ಸುಮಾರಿಗೆ ನಡೆದಿದೆ.
ವಾದಿರಾಜ ಆಚಾರ್ಯ (65) ಸಿಡಿಲಾಘಾತಕ್ಕೆ ಬಲಿಯಾದವರು ಎಂದು ತಿಳಿದುಬಂದಿದೆ.
ಸಿಡಿಲಾಘಾತದಿಂದ ಮನೆಯ ವೈರಿಂಗ್ ಸುಟ್ಟು ಕರಕಲಾಗಿದೆ. ಕಾರ್ಕಳ ತಹಶೀಲ್ದಾರ್ ಪುರಂದರ ಕೆ, ಗ್ರಾಮಕರಣಿಕ ಶಿವಪ್ರಸಾದ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





