ರೊಝಾರಿಯೊ ಪ್ರೌಢಶಾಲೆಯಲ್ಲಿ ಶಿಕ್ಷಕ-ರಕ್ಷಕರ ಸಭೆ

ಮಂಗಳೂರು, ನ.15: ನಗರದ ರೊಝಾರಿಯೊ ಪ್ರೌಢಶಾಲೆಯಲ್ಲಿ ಶಿಕ್ಷಕ-ರಕ್ಷಕರ ಸಭೆಯು ರೊಝಾರಿಯೊ ಕಲ್ಚರಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶಾಲಾ ಸಂಚಾಲಕ ಫಾ.ಅಲ್ಪ್ರೇಡ್ ಜೆ.ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ಮತ್ತು ಪೋಷಕರು ಹಾಗೂ ಶಿಕ್ಷಕರೊಂದಿಗೆ ತಮ್ಮ ಬಾಂಧವ್ಯ ಹಾಗೂ ಕರ್ತವ್ಯದ ಬಗ್ಗೆ ಹಿತೋಪದೇಶವನ್ನು ಹಿರಿಯ ಶಿಕ್ಷಕಿ ಆಲಿಸ್ ಕೆ.ಜೆ ತಿಳಿಸಿದರು. ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ಶಾಲಾ ದಿನಚರಿ ಮತ್ತು ವಿದ್ಯಾರ್ಥಿಗಳ ಗುಣನಡತೆ ಬಗ್ಗೆ ಮಾತನಾಡಿದರು.
2020-2021ನೇ ಶೈಕ್ಷಣಿಕ ಸಾಲಿನಲ್ಲಿ ಹತ್ತನೆ ತರಗತಿಯ ಪರೀಕ್ಷೆಯಲ್ಲಿ ಶಾಲೆಗೆ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ವಿಷಯವಾರು ಗರಿಷ್ಠ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅವರ ಪೋಷಕರ ಸಮ್ಮುಖ ನಗದು ನೀಡಿ ಪುರಸ್ಕರಿಸಲಾಯಿತು.
20201-2022ನೆ ಸಾಲಿನ ಶಿಕ್ಷಕ-ರಕ್ಷಕರ ಸಭೆಗೆ ಸದಸ್ಯರನ್ನು ಆರಿಸಲಾಯಿತು. ದೈಹಿಕ ಶಿಕ್ಷಕ ಕಾರಿಯಪ್ಪರೈ ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಲ್ಯಾನ್ಸಿ ಕ್ರಾಸ್ತ ಸಹಕರಿಸಿದರು. ಶಿಕ್ಷಕಿ ಲವೀನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.





