ಮಂಗಳೂರು ಹ್ಯಾಂಡ್ಬಾಲ್ ಅಸೋಸಿಯೇಶನ್‌ನಿಂದ ಬೀಳ್ಕೊಡುಗೆ

ಮಂಗಳೂರು, ನ.15: ಬಾಗಲಕೋಟೆಯ ಮುಧೋಳದಲ್ಲಿ ನ.19ರಿಂದ 21ರವರೆಗೆ ನಡೆಯುವ 18ನೆ ಜೂನಿಯರ್ ಸ್ಟೇಟ್ ಚಾಂಪಿಯನ್ ಶಿಪ್ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಮಂಗಳೂರು ಹ್ಯಾಂಡ್ಬಾಲ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಲಾಯಿತು.
ಅಸೋಸಿಯೇಶನ್‌ನ ಅಧ್ಯಕ್ಷ ಆರ್. ಧನರಾಜ್, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಅರಿಗ, ಕೋಚ್ ಮುಕೇಶ್ ಕರ್ಕೇರಾ, ತಂಡದ ಸದಸ್ಯರಾದ ಲಿತಿನ್ ಉಳ್ಳಾಲ್ (ನಾಯಕ) ಪ್ರೀತಮ್, ಪ್ರಿನ್‌ಸ್ಟನ್, ಸಾತ್ವಿಕ್, ಅಕ್ಷಯ್, ಯಶ್, ಸ್ವಯಂ, ಸೌರವ್, ರಾಹುಲ್, ತುಷ್ವೀತ್ ಉಪಸ್ಥಿತರಿದ್ದರು.
Next Story





