ದೈವಸ್ಥಾನಕ್ಕೆ ನುಗ್ಗಿ ಬೆಳ್ಳಿಯ ಬಿಂಬ ಕಳವು: ದೂರು
ಮಂಗಳೂರು, ನ.15: ನಗರದ ಕೋಡಿಕಲ್‌ನ ಮನೆಯೊಂದರ ಸಮೀಪವಿರುವ ದೈವಸ್ಥಾನದೊಳಗೆ ನುಗ್ಗಿ ಬೆಳ್ಳಿಯ ಬಿಂಬ (ಪಾಪೆ) ಕಳವು ಮಾಡಿರುವುದು ಸೋಮವಾರ ಗಮನಕ್ಕೆ ಬಂದಿದೆ.
ಮಂಗಳವಾರದಂದು ಸಂಕ್ರಮಣ ಇರುವ ಪ್ರಯುಕ್ತ ಸೋಮವಾರ ದೈವದ ಗುಡಿಯನ್ನು ಸ್ವಚ್ಛಗೊಳಿಸಲು ಹೋದಾಗ ದೈವಸ್ಥಾನದ ಬೀಗ ಮುರಿದಿರುವುದು ಮತ್ತು ಪಾಪೆಯನ್ನು ಕಳವು ಮಾಡಿರುವುದು ಗೊತ್ತಾಗಿದೆ ಎಂದು ದೈವಸ್ಥಾನಕ್ಕೆ ಸಂಬಂಧಿಸಿದವರು ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
Next Story





