ಬಿಹಾರ: ಅಪ್ರಾಪ್ತೆಯ ಅಪಹರಣಗೈದು ನಿರಂತರ 1 ತಿಂಗಳು ಅತ್ಯಾಚಾರ
ಲಕ್ನೋ, ನ.15: ಮೂವರು ಯುವಕರು ಬಿಹಾರದ ಪಶ್ಚಿಮಬಂಗಾಳದ ಚಂಪಾರಣ್ ಜಿಲ್ಲೆಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಗೋರಖ್ಪುರಕ್ಕೆ ಕೊಂಡೊಯ್ದು 1 ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗುಹಾನಾ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ದಾಖಲಿಸಿದ ದೂರಿನಲ್ಲಿ, ಬಾಲಕಿ ಅಕ್ಟೋಬರ್ 7ರಂದು ಬಯಲು ಪ್ರದೇಶಕ್ಕೆ ಬಹಿರ್ದೆಸೆಗೆ ತೆರಳಿದ ಸಂದರ್ಭ ಅಪಹರಿಸಲಾಗಿದೆ ಎಂದು ಹೇಳಲಾಗಿದೆ. ತ್ರಿಚಕ್ರ ವಾಹನದಲ್ಲಿ ಆಗಮಿಸಿದ ಆರೋಪಿಗಳಾದ ಅನಿಲ್ ಹಾಗೂ ಆತನ ಇಬ್ಬರು ಸ್ನೇಹಿತರು ಬಾಲಕಿಯನ್ನು ಅಪಹರಿಸಿದ್ದಾರೆ. ಅನಂತರ ಬಾಲಕಿಯನ್ನು ನರ್ಕತಿಗಂಡ್ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ ಎಂದು ಾಲಕಿಯ ತಂದೆ ದೂರಿನಲ್ಲಿ ಹೇಳಿದ್ದಾರೆ.
Next Story