ದೇಶದ ಮೊದಲ ‘ಹುಲ್ಲು ಸಂರಕ್ಷಣಾಲಯ’ ಆರಂಭ
ಡೆಹ್ರಾಡೂನ್, ನ. 15: ದೇಶದ ಮೊದಲ ‘ಹುಲ್ಲು ಸಂರಕ್ಷಣಾಲಯ’ವನ್ನು ಉತ್ತರಾಖಂಡದ ಅರಣ್ಯ ಇಲಾಖೆಯ ಸಂಶೋಧನಾ ಇಲಾಖೆ ಅಲ್ಮೋರ ಜಿಲ್ಲೆಯ ರಾಣಿಖೇಟ್ನಲ್ಲಿ ರವಿವಾರ ಉದ್ಘಾಟಿಸಿದೆ.
ಹುಲ್ಲುಗಾವಲು ವಿವಿಧ ರೀತಿಯ ಅಪಾಯವನ್ನು ಎದುರಿಸುತ್ತಿದೆ. ಅಲ್ಲದೆ ಹುಲ್ಲುಗಾವಲು ವ್ಯಾಪ್ತಿ ಕಿರಿದಾಗುತ್ತಿದೆ. ಇದರಿಂದ ಹುಲ್ಲುಗಾವಲನ್ನು ಅವಲಂಬಿಸಿದ ಕೀಟ, ಹಕ್ಕಿ ಹಾಗೂ ಸಸ್ತನಿಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ. 2 ಎಕರೆ ಪ್ರದೇಶದಲ್ಲಿ ಆರಂಭಿಸಲಾಗಿರುವ ಈ ಯೋಜನೆಗೆ ಕೇಂದ್ರ ಸರಕಾರದ ಸಿಎಎಂಪಿಎ ಯೋಜನೆ ಹಣಕಾಸಿನ ನೆರವು ನೀಡಿದೆ. ಇಲಾಖೆಯ ಸಂಶೋಧನಾ ಘಟಕ ಈ ಸಂರಕ್ಷಣಾ ಪ್ರದೇಶವನ್ನು ಅಭಿವೃದ್ಧಿಪಡಿಸಲು 3 ವರ್ಷಗಳನ್ನು ತೆಗೆದುಕೊಂಡಿದೆ. ಈ ಸಂರಕ್ಷಣಾಲಯದಲ್ಲಿ ಸುಮಾರು 90 ವಿಭಿನ್ನ ಹುಲ್ಲಿನ ಪ್ರಬೇಧಗಳನ್ನು ಸಂರಕ್ಷಿಸಲಾಗಿದೆ. ಅಲ್ಲದೆ, ಹುಲ್ಲುಗಳ ವೈಜ್ಞಾನಿಕ, ಪಾರಿಸರಿಕ, ಔಷಧೀಯ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆ ಕುರಿತ ಮಾಹಿತಿ ತಿಳಿಸುತ್ತದೆ ಎಂದು ಅವರು ತಿಳಿ ಸಿದ್ದಾರೆ.
Next Story





