ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಭೀಕರ ಅಗ್ನಿ ಆಕಸ್ಮಿಕ

ಮುಂಬೈ: ಮುಂಬೈ ಉಪನಗರ ಕಂಜೂರ್ ಮಾರ್ಗ್‌ನಲ್ಲಿರುವ ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಸೋಮವಾರ ಸಂಜೆ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಎಂಟು ಅಗ್ನಿಶಾಮಕ ವಾಹನಗಳು ಹಾಗೂ ನಾಲ್ಕು ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದವು. ಬೆಂಕಿಯ ಜ್ವಾಲೆಗಳ ನಡುವೆ ದಟ್ಟವಾದ ಹೊಗೆ ಆಗಸದೆತ್ತರಕ್ಕೂ ವ್ಯಾಪಿಸಿರುವ ದೃಶ್ಯಾವಳಿಗಳು ಬಿತ್ತರಗೊಂಡಿವೆ.
"ಕಂಜೂರ್ ಮಾರ್ಗ್ ಪೂರ್ವದಲ್ಲಿರುವ ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ದುರಂತ ಸಂಭವಿಸಿದ ಬಗ್ಗೆ ರಾತ್ರಿ 9 ಗಂಟೆ ವೇಳೆಗೆ ಮಾಹಿತಿ ಬಂದಿದೆ" ಎಂದು 7ನೇ ವಲಯ ಡಿಸಿಪಿ ಪ್ರಶಾಂತ್ ಕದಂ ಹೇಳಿದ್ದಾರೆ. ಅಕ್ಕಪಕ್ಕದ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Next Story