ಮುಂಬೈ:ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನ ಜೀವ ಉಳಿಸಿದ ಪಾಯಿಂಟ್ ಮ್ಯಾನ್
ಘಟನೆಯ ವೀಡಿಯೊ ಹಂಚಿಕೊಂಡ ಸೆಂಟ್ರಲ್ ರೈಲ್ವೆ

ಮುಂಬೈ: ಮಹಾರಾಷ್ಟ್ರದ ಕಲ್ಯಾಣ್ ನಿಲ್ದಾಣದಲ್ಲಿ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಕೆಳಗೆ ಬಿದ್ದ ಪ್ರಯಾಣಿಕರೊಬ್ಬರ ಜೀವವನ್ನು ಸಮಯ ಪ್ರಜ್ಞೆ ಮೆರೆದ ಪಾಯಿಂಟ್‌ಮ್ಯಾನ್ ವೊಬ್ಬರು ರಕ್ಷಿಸಿದ್ದಾರೆ ಎಂದು ಸೆಂಟ್ರಲ್ ರೈಲ್ವೇ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಲಾಗಿದೆ.
ಮುಂಬೈ ಸಮೀಪದ ಕಲ್ಯಾಣ್ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ 11:54 ಕ್ಕೆ ರೈಲು ಸಂಖ್ಯೆ 02321 ನಿಲ್ದಾಣದಿಂದ ಹೊರಡಲು ಆರಂಭಿಸಿದಾಗ ಈ ಘಟನೆ ನಡೆದಿದೆ.
ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವಿನ ಅಂತರದಲ್ಲಿ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಬಿದ್ದಾಗ ಜನನಿಬಿಡ ರೈಲು ನಿಲ್ದಾಣದಲ್ಲಿ ರೈಲು ಚಲಿಸುತ್ತಿರುವುದನ್ನು ತೋರಿಸುವ ದೃಶ್ಯಗಳನ್ನು ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಪಾಯಿಂಟ್‌ಮ್ಯಾನ್ ಶಿವಾಜಿ ಸಿಂಗ್ ವ್ಯಕ್ತಿಯನ್ನು ಸುರಕ್ಷಿತವಾಗಿ ಎಳೆದರು ಹಾಗೂ ಅಲ್ಲಿದ್ದ ಇತರರು ಕೂಡ ಪ್ರಯಾಣಿಕನ ರಕ್ಷಣೆಗೆ ಧಾವಿಸಿದರು.
ಕೆಲವು ತಿಂಗಳ ಹಿಂದೆ ಇದೇ ರೀತಿಯ ಘಟನೆಯಲ್ಲಿ ಮುಂಬೈನ ಸ್ಯಾಂಡ್‌ಹರ್ಸ್ಟ್ ರೋಡ್ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲು ಹತ್ತಲು ಯತ್ನಿಸಿ ಕೆಳಗೆ ಬಿದ್ದ 50 ವರ್ಷದ ಮಹಿಳೆಯೊಬ್ಬರನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೇಬಲ್ ರಕ್ಷಿಸಿದ್ದರು.
कल्याण स्टेशन के पाइंटसमैन ने बचाई एक यात्री की जान।
— Central Railway (@Central_Railway) November 15, 2021
दिनांक 14.11.2021 कल्याण स्टेशन पर 02321अप 11.54 बजे जैसे ही रवाना हुई, पाइंटसमैन श्री शिवजी सिंह ने एक यात्री को प्लेटफॉर्म एवं ट्रेन के बीच गिरते हुए देखा। पाइंटसमैन ने तुरंत उसकी मदद की और जान बचाई। @RailMinIndia pic.twitter.com/8gckQpxcaU