ತನ್ನನ್ನು ಲೆಕ್ಕಿಸದೇ ಮುಂದೆ ಸಾಗಿದ ಪ್ರಧಾನಿ ಮೋದಿ ಕಾರನ್ನು ವೇಗವಾಗಿ ನಡೆದು ಹಿಂಬಾಲಿಸಿದ ಆದಿತ್ಯನಾಥ್
ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ

ಲಕ್ನೋ: ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಮತ್ತು ಕಾರಿನ ಹಿಂದೆ ವೇಗವಾಗಿ ನಡೆಯುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಮುಂದೆ ಸಾಗಿದ ವೇಳೆ ಅವರು ಹಿಂದಿನಿಂದ ವೇಗವಾಗಿ ನಡೆದುಕೊಂಡು ಬರುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
341 ಕಿಮೀ ಉದ್ದದ ಪೂರ್ವಾಂಚಲ್ ಹೆದ್ದಾರಿಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಸುಲ್ತಾನ್‌ಪುರಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಪ್ರಧಾನಿಯವರನ್ನು ಸ್ವಾಗತಿಸಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಆಗಮಿಸಿದ್ದರು. "ಪ್ರಧಾನಿಯನ್ನು ಸ್ವಾಗತಿಸಲು ಅವರ ಕಾರಿನ ಹಿಂದೆ ಆದಿತ್ಯನಾಥ್ ಓಡಬೇಕಾಯಿತು" ಎಂದು Arrownews ನ ಅಧಿಕೃತ ಸಾಮಾಜಿಕ ತಾಣ ಖಾತೆಯಲ್ಲಿ ಪ್ರಕಟಿಸಲಾಗಿದೆ.
ವೀಡಿಯೋ ಶೀಘ್ರವೇ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಕೆಲ ಬಳಕೆದಾರರು ಬಿಜೆಪಿ ಪಕ್ಷದಲ್ಲಿ ಅವರ ಸ್ಥಿತಿಯ ಕುರಿತು ಆದಿತ್ಯನಾಥ್ ರನ್ನು ಅಪಹಾಸ್ಯ ಮಾಡಿದರೆ, ಕೆಲವರು, ಪ್ರಧಾನಿ ನರೇಂದ್ರ ಮೋದಿ ಆದಿತ್ಯನಾಥ್ ರನ್ನು ಉದ್ದೇಶಪೂರ್ವಕವಾಗಿಯೇ ಹಿಂದೆ ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯಾರೂ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ ಮತ್ತು ಅವರು ಯಾವಾಗಲೂ ತಮ್ಮ ಸ್ಥಾನಮಾನಕ್ಕೆ ಅಪಾಯವನ್ನುಂಟುಮಾಡುವ ಜನರನ್ನು ಬದಿಗಿಟ್ಟಿದ್ದಾರೆ ಎಂದು ಕೆಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಹಲವರು ಈ ಕುರಿತು ವ್ಯಂಗ್ಯವಾಡಿದ್ದಾರೆ. ಇನ್ನು ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷ ನಾಯಕರು ಕೂಡಾ ಈ ಸಂದರ್ಭವನ್ನು ಬಳಸಿಕೊಂಡು ಟ್ವೀಟ್ ಮಾಡಿದ್ದಾರೆ.
ये व्यवहार तो CM साहेब के साथ ठीक नहीं। pic.twitter.com/ZNNXoeBFxN
— Sanjay Singh AAP (@SanjayAzadSln) November 16, 2021
तुमने हमारी आवभगत का अच्छा सिला दिया
— Akhilesh Yadav (@yadavakhilesh) November 16, 2021
जनता से पहले तुमने ही हमें ‘पैदल’ कर दिया
बड़े बेआबरू होकर इन सड़कों से हम गुजरे… pic.twitter.com/iVpp447Bwn
UP CM Yogi Adityanath arrives to welcome PM Modi in Sultanpur. He had to run behind his car to get him. pic.twitter.com/Y7dhUAm7rq
— Arrow News (@ArrowBulletin) November 16, 2021







