ಹಳೆಯಂಗಡಿ: ಬೈಕ್ ಢಿಕ್ಕಿ; ಮಹಿಳೆಗೆ ಗಾಯ
ಮಂಗಳೂರು, ನ.17: ನಗರದ ಹಳೆಯಂಗಡಿಯಲ್ಲಿ ಮಹಿಳೆಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಶಕುಂತಳಾ ಎಂಬವರು ಪಡುಬಿದ್ರೆಯಲ್ಲಿರುವ ತನ್ನ ಮನೆಯಿಂದ ಹಳೆಯಂಗಡಿಗೆ ಖಾಸಗಿ ಬಸ್ಸಿನಲ್ಲಿ ಬಂದಿಳಿದು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ. 66ರ ರಸ್ತೆಯನ್ನು ದಾಟುವಾಗ ಡಿವೈಡರ್ ಬಳಿ ಮುಲ್ಕಿಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ, ಇದರಿಂದ ಶಕುಂತಳಾ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆರೋಪಿ ಬೈಕ್ ಸವಾರನ ವಿರುದ್ಧ ಸಂಚಾರ ಉತ್ತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story