ನ.19: 'ಸಿಟಿ ಗೋಲ್ಡ್' ಶಾಪಿಂಗ್ ಫೆಸ್ಟಿವಲ್‌ಗೆ ಚಾಲನೆ

ಮಂಗಳೂರು, ನ.17: ನಗರದ ಕಂಕನಾಡಿಯ ಬೈಪಾಸ್ ರಸ್ತೆಯಲ್ಲಿರುವ 'ಸಿಟಿ ಗೋಲ್ಡ್' ನಲ್ಲಿ ಐದು ತಿಂಗಳ ಕಾಲ ನಡೆಯುವ ಶಾಪಿಂಗ್ ಫೆಸ್ಟಿವಲ್‌ಗೆ ನ.19ರಂದು ಸಂಜೆ 4 ಗಂಟೆಗೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮೆಸ್ಕಾಂನ ನಿರ್ದೇಶಕ ಕಿಶೋರ್ ಕುಮಾರ್ ಪುತ್ತೂರು, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಮುನೀಬ್ ಬೆಂಗರೆ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು, ಪುತ್ತೂರು, ಕಾಸರಗೋಡಿನಲ್ಲಿರುವ ಸಿಟಿ ಗೋಲ್ಡ್‌ನಲ್ಲಿ ಹಬ್ಬದ ಪ್ರಯುಕ್ತ ಐದು ತಿಂಗಳ ಕಾಲ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಕಳೆದ 23 ವರ್ಷಗಳಿಂದ ಕರ್ನಾಟಕ ಮತ್ತು ಕೇರಳದಲ್ಲಿ ಮನೆಮಾತಾಗಿರುವ ಮತ್ತು ಚಿನ್ನದ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಸಿಟಿ ಗೋಲ್ಡ್ ಗುಣಮಟ್ಟ ಮತ್ತು ಶುದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಹಬ್ಬದ ಹಿನ್ನೆಲೆಯಲ್ಲಿ 2021ರ ನವೆಂಬರ್‌ನಿಂದ 2022ರ ಮಾರ್ಚ್‌ವರೆಗೆ ಶಾಪಿಂಗ್ ಫೆಸ್ಟಿವಲ್ ಆಯೋಜಿಸಿದೆ.
ಐದು ತಿಂಗಳ ಮಹಾಮೇಳದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಚಿನ್ನಾಭರಣಗಳ ಸಂಗ್ರಹ ಲಭ್ಯವಿದೆ. ದೇಶ ವಿದೇಶದ ಆಧುನಿಕ ಹಾಗೂ ಸಾಂಪ್ರದಾಯಿಕ ಚಿನ್ನಾಭರಣ ವಿನ್ಯಾಸ ಲಭ್ಯವಿದೆ. ಹಬ್ಬದ ಸಂಭ್ರಮ ಹೆಚ್ಚಿಸಲು ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಅಭೂತಪೂರ್ವ ನೆಕ್ಲೆಸ್, ಬಳೆಗಳು, ಕಿವಿಯೋಲೆ ಮತ್ತು ಉಂಗುರಗಳನ್ನು ಒಳಗೊಂಡಿದೆ. ಈ ಐದು ತಿಂಗಳಲ್ಲಿ ತಯಾರಿಕಾ ವೆಚ್ಚದಲ್ಲಿ ವಿಶೇಷ ಕೊಡುಗೆ ಯೊಂದಿಗೆ ಪ್ರತಿ ದಿನ ಅನೇಕ ಬಹುಮಾನ ಗೆಲ್ಲುವ ಅವಕಾಶ ಇದೆ. ಪ್ರತಿ ವಾರಾಂತ್ಯ ಅದೃಷ್ಟಶಾಲಿ ವಿಜೇತರಿಗೆ ವಜ್ರದ ಉಂಗುರ ಹಾಗೂ ಮಾಸದ ಅಂತ್ಯಕ್ಕೆ ನಡೆಯುವ ಅದೃಷ್ಟಶಾಲಿಗಳ ಆಯ್ಕೆಯ ವೇಳೆ ವಜ್ರದ ನೆಕ್ಲೆಸ್ ಗೆಲ್ಲುವ ಅವಕಾಶ ಇದೆ.
ಹಬ್ಬದ ಕೊನೆಯಲ್ಲಿ ಬಂಪರ್ ಬಹುಮಾನದ ವಿಜೇತರಿಗೆ ಮಾಲ್ದೀವ್ಸ್, ದುಬೈ ಎಕ್ಸ್‌ಪೊಗೆ ವಿಶೇಷ ಪ್ರವಾಸದ ಅವಕಾಶ ಇದೆ. ಸಿಟಿ ಗೋಲ್ಡ್‌ನ ಪ್ರತೀ ಆಭರಣಗಳ ಮೇಲೂ ಶೇ.100 ಬಿಐಎಸ್ 916 ಹಾಲ್ ಮಾರ್ಕ್ ಮುದ್ರೆಯಿರುತ್ತದೆ.
ಆಭರಣಗಳ ಉಚಿತ ನಿರ್ವಹಣೆ, ಮಾರಾಟ ನಂತರದ ಸೇವೆ, ಅಂತರಾಷ್ಟ್ರೀಯ ತರಬೇತಿ ಹೊಂದಿದ ಸಿಬ್ಬಂದಿ ವರ್ಗದ ಸೇವೆ ಕೂಡಾ ಲಭ್ಯವಿದೆ. ಪರಿಶುದ್ಧತೆಯೊಂದಿಗೆ ಮುನ್ನಡೆಯುತ್ತಿರುವ ಸಿಟಿ ಗೋಲ್ಡ್ ಗ್ರಾಹಕರಿಗೆ ಪ್ರಾಮಾಣಿಕ ಸೇವೆಯನ್ನು ನೀಡುತ್ತಿದೆ. ಪೋಲ್ಕಿ ರಾಯಲ್ಸ್ ಕಲೆಕ್ಷನ್, ಮೊಗಲ್ ರೋಯಲ್ ಕಲೆಕ್ಷನ್, ರಜಪುತ್ರ ರೋಯಲ್ ಕಲೆಕ್ಷನ್ ಹೀಗೆ ನಾನಾ ಶೈಲಿಯ ವಿಶೇಷ ಆ್ಯಂಟಿಕ್ ಕಲೆಕ್ಷನ್ ಸಂಗ್ರಹವೇ ಇದೆ.
ಕಾಸರಗೋಡು, ಮಂಗಳೂರು, ಪುತ್ತೂರು ಹಾಗೂ ಉಪ್ಪಳದ ಮಳಿಗೆಯಲ್ಲೂ ವಿಶೇಷ ಸಂಗ್ರಹವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.







