ನ.20ಕ್ಕೆ ಹರೇಕಳ ಹಾಜಬ್ಬ ಅವರೊಂದಿಗೆ `ಮನೆಯಂಗಳದಲ್ಲಿ ಮಾತುಕತೆ'

ಬೆಂಗಳೂರು, ನ. 17: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು `ಮನೆಯಂಗಳದಲ್ಲಿ ಮಾತುಕತೆ' ಎಂಬ ವೈಶಿಷ್ಟಪೂರ್ಣ ಕಾರ್ಯಕ್ರಮವನ್ನು ನ.20 ರಂದು ಶನಿವಾರ ಸಂಜೆ 4 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ತಿಂಗಳ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕøತ ಹಾಗೂ ಸಮಾಜ ಸೇವಕರಾದ ಹರೇಕಾಳ ಹಾಜಬ್ಬ ಅವರು ಆಗಮಿಸಲಿದ್ದಾರೆ. ಹಾಜಬ್ಬ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ಗ್ರಾಮದವರು. ಅಕ್ಷರ ಜ್ಞಾನವಿಲ್ಲದೆ ಹಣ್ಣಿನ ವ್ಯಾಪಾರ ಮಾಡಿ ಮಕ್ಕಳ ಕಲಿಕೆಗೆ ಶಾಲೆಯನ್ನು ಕಟ್ಟಿಸಿದ ತ್ಯಾಗಮೂರ್ತಿ ಅವರು. ಅವರು ತಮ್ಮ ಬದುಕಿನ ಅನುಭವಗಳನ್ನು ಮನೆಯಂಗಳದಲ್ಲಿ ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





